• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತತ 25ನೇ ದಿನಕ್ಕೆ ಮಮತಾ ಉಪವಾಸ, ಸ್ಥಿತಿ ಗಂಭೀರ!

By Staff
|

ಕೋಲ್ಕತಾ : ಮಮತಾ ಬ್ಯಾನರ್ಜಿ ಉಪವಾಸ 25ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕಮಾಂಡೋ ಆಸ್ಪತ್ರೆ ಮೂಲಗಳು ಗುರುವಾರ ತಿಳಿಸಿವೆ.

ಮಂಗಳವಾರ ರಾತ್ರಿಯಿಂದ ಕೃತಕ ಉಸಿರಾಟದಲ್ಲಿರುವ ಮಮತಾ ಅವರ ಆರೋಗ್ಯದತ್ತ ಭೂಸೇನಾ ವೈದ್ಯರು ಗಮನ ಹರಿಸಿದ್ದಾರೆ. ಅಶಕ್ತಿ ಹಾಗೂ ಆಗಾಗ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ.

ಗುರುವಾರ ಉಪವಾಸ ಕೊನೆಗೊಳಿಸಬಹುದೆಂದು ಹರಡಿದ್ದ ವದಂತಿ ಸುಳ್ಳಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಉಪವಾಸ ಕೈಬಿಡುವಂತೆ ಮಮತಾ ಬ್ಯಾನರ್ಜಿ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಬುದ್ಧದೇವ್‌ ಆಹ್ವಾನ : ಸಿಂಗೂರು ಯೋಜನೆ ಕುರಿತು ಮಮತಾ ಜೊತೆ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾತುಕತೆಗೆ ಸಿದ್ಧ. ಆದರೆ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯೋಜನೆ ಕಾರ್ಯರೂಪಕ್ಕೆ ಬಾರದಿದ್ದರೆ ನಾವು ಜಗತ್ತಿನ ಮುಂದೆ ತಲೆತಗ್ಗಿಸಬೇಕಾಗುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಸಿಂಗೂರು ಕೃಷಿ ಭೂಮಿ ರಕ್ಷಣಾ ಸಮಿತಿ ಪ್ರತಿಭಟನೆ ಮುಂದುವರಿಸಿದ್ದು, ರಾಜ್ಯ ಸರ್ಕಾರ ಯೋಜನೆಗೆ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ 960 ಎಕರೆ ಭೂಮಿ ಪೈಕಿ 406 ಎಕರೆ ಭೂಮಿಯನ್ನು ರೈತರಿಂದ ಬಲವಂತವಾಗಿ ಕಿತ್ತುಕೊಂಡಿದೆ ಎಂದು ಆರೋಪಿಸಿದೆ. ಆದರೆ ಮುಖ್ಯಮಂತ್ರಿ ಭಟ್ಟಾಚಾರ್ಯ ಈ ಆರೋಪ ಅಲ್ಲಗಳೆಯುತ್ತಲೇ ಬಂದಿದ್ದು, ಮಾಲೀಕರ ಅನುಮತಿ ಇಲ್ಲದೆ ಯಾವುದೇ ಜಮೀನು ಸ್ವಾಧೀನಪಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಹಿನ್ನೆಲೆ : ಟಾಟಾ ಮೋಟಾರ್ಸ್‌ ಸಂಸ್ಥೆ ಸಣ್ಣ ಕಾರು ಉತ್ಪಾದನಾ ಘಟಕ ನಿರ್ಮಿಸಲು ಮುಂದಾಗಿದ್ದು, ಸರ್ಕಾರ ಇದಕ್ಕಾಗಿ ಹೂಗ್ಲಿ ಜಿಲ್ಲೆ ಸಿಂಗೂರಿನ ಕೃಷಿ ಜಮೀನನ್ನು ಬಲವಂತದಿಂದ ವಶಪಡಿಸಿಕೊಳ್ಳುತ್ತಿದೆ. ರೈತರ ಜಮೀನು ಮರಳಿ ನೀಡಬೇಕು ಎಂದು ಒತ್ತಾಯಿಸಿ ಮಮತಾ ಡಿಸೆಂಬರ್‌ 4ರಿಂದ ಉಪವಾಸ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more