• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಸಲ್‌ ಚಳವಳಿ : ಈ ಹೊತ್ತು ದಿನೇಶ, ನಾಳೆ ಗಣೇಶ...?

By Staff
|

ಚಿಕ್ಕಮಗಳೂರು : ಶೃಂಗೇರಿ ಸಮೀಪದ ಅರಣ್ಯದಲ್ಲಿ ನಡೆಸಲಾದ ಪೊಲೀಸರ ಕಾರ್ಯಾಚರಣೆಯಲ್ಲಿ, ಬಲಿಯಾದ ವ್ಯಕ್ತಿಯನ್ನು ದಿನೇಶ್‌ ಅಲಿಯಾಸ್‌ ದಿನಕರ ಎಂದು ಖಚಿತಪಡಿಸಲಾಗಿದೆ.

ಮೃತ ದೇಹವನ್ನು ವಿಕ್ರಮ್‌ ಗೌಡ ಎಂದು ಮೊದಲು, ನಂತರ ರಮೇಶ ಎಂದು ಪೊಲೀಸರು ಗುರ್ತಿಸಿದ್ದರು. ಅಂತಿಮವಾಗಿ, ಮೃತನನ್ನು ದಿನೇಶ್‌ ಎಂದು ಪೋಷಕರು ಗುರ್ತಿಸಿದ್ದಾರೆ. ಈತ ಬೆಳ್ತಂಗಡಿ ತಾಲೂಕಿನ ಕುತ್ಲೂರಿನವನು.

ಕೂಲಿ ಕಾರ್ಮಿಕರ ಮಗನಾಗಿದ್ದ ಈತ, 10ನೇ ತರಗತಿಗೆ ವ್ಯಾಸಂಗ ನಿಲ್ಲಿಸಿದ್ದ. ಕುದುರೆ ಮುಖ ರಾಷ್ಟ್ರೀಯ ಉದ್ಯಾನ ಹೋರಾಟದಲ್ಲಿ ಪಾಲ್ಗೊಂಡಿದ್ದ. 2003ರಿಂದ ತಲೆತಪ್ಪಿಸಿಕೊಂಡು ನಕ್ಸಲ್‌ ಚಳವಳಿ ಜೊತೆ ಸೇರಿಕೊಂಡಿದ್ದ ಎನ್ನಲಾಗಿದ್ದು, ಶವವನ್ನು ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ.

ನಕ್ಸಲ್‌ ಚಳವಳಿ : ಇಂದು ದಿನೇಶ, ನಾಳೆ ಗಣೇಶ, ನಾಡಿದ್ದು ರಮೇಶ... ? -ಹೀಗೆ ಇನ್ನೆಷ್ಟು ತಲೆಗಳು ಬೀಳುತ್ತವೆಯೋ ಗೊತ್ತಿಲ್ಲ. ನಮ್ಮ ನಡುವಿನ ಹುಡುಗರು ಬಂದೂಕು ಹಿಡಿಯುವ ಪರಿಸ್ಥಿತಿಗೆ ಯಾರು ಹೊಣೆ ಎನ್ನುವಂತಹ ಮಾತುಗಳು ನಮ್ಮ ಮಧ್ಯೆ ಇವೆ.

ನಕ್ಸಲ್‌ ಪರ ಮೃದು ಧೋರಣೆ ಹೊಂದಿದ್ದಾರೆಂದು ಪತ್ರಕರ್ತೆ ಗೌರಿ ಲಂಕೇಶ್‌ ಮತ್ತಿತರರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಒಟ್ಟಾರೆ ನಕ್ಸಲ್‌ ಪರ ಮತ್ತು ವಿರುದ್ಧ ವಾದಗಳು ಇದ್ದೇ ಇವೆ.

ನಕ್ಸಲ್‌ ಚಳವಳಿ ಬಗ್ಗೆ ನಿಮ್ಮ ಅನಿಸಿಕೆ ಬರೆಯಿರಿ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more