• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಯಾಕೆ ಎನ್ನುವ ಬ್ಯಾಂಗ್‌ಲೂರಿಗರ ಗಮನಕ್ಕೆ...

By Staff
|

ಈ ಸಂಕಟದಲ್ಲಿ ಎಲ್ಲರೂ ಒಂದು ಕನ್ನಡ ಶಬ್ದವನ್ನಾದರೂ ಮಾತಾಡಬೇಕಾಗಿ ಬರಲಿ ಎಂದು ಬೆಂಗಳೂರನ್ನು ಬೆಂಗಳೂರು ಅನ್ನುವಂತೆ ನಾನು ಧರಂಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಕೇಳಿಕೊಂಡೆ- ಅಷ್ಟೆ’ ಇತ್ಯಾದಿ ಹೇಳುತ್ತೇನೆ.

ಸರಿ. ಬೆಂಗಳೂರು ಎಂದು ಹೆಸರು ಬದಲಾಯಿಸಿದರೂ ಹೊರಗಿನ ಹಲವರಿಗೆ ‘ಳ’ಕಾರ ಸಾಧ್ಯವಿಲ್ಲವಲ್ಲ ಎಂದು ಹಿರಿಯರೊಬ್ಬರು ಹೇಳುತ್ತಾರೆ. ಆಗ ನನಗೆ ನನ್ನ ಆಯುಷ್ಯದ ಬಹುಪಾಲನ್ನು ಇಂಗ್ಲಿಷಿನ ‘ಎ’ಗೂ ನಮ್ಮ ಉಚ್ಛಾರದ ‘ಯೆ’ಗೂ ನಡುವಿನ ವ್ಯತ್ಯಾಸ ಗೊತ್ತಾಗುವಂತೆ ಮಾತಾಡಲು ಹೆಣಗಿದ್ದು ನೆನಪಾಗುತ್ತದೆ.

ಇಂಗ್ಲಿಷ್‌ ಮಾತಾಡುವವರೂ ಕೊಂಚ ಕಷ್ಟಪಡಲಿ ಬಿಡಿ ಎನ್ನುತ್ತೇನೆ. ಹೀಗೆಲ್ಲ ಕಷ್ಟಕೊಡಲು ಶುರುಮಾಡಿದರೆ ಅವರು ತಮ್ಮ ಅಂಗಡಿಗಳನ್ನು ಮುಚ್ಚಿ ಹೋಗಿಬಿಡುತ್ತಾರೆ, ಜೋಕೆ, ನಮ್ಮ ಅಭಿವೃದ್ಧಿಗಾಗಿ ಕಾಲ್‌ ಸೆಂಟರ್‌ಗಳನ್ನು ನಡೆಸುವ ಪುಣ್ಯಾತ್ಮರನ್ನು ಕೆಣಕಬಾರದು ಎಂದಾಗ ನನ್ನ ಮೂರ್ಖ ಉತ್ತರವನ್ನು ಎಗ್ಗಿಲ್ಲದೆ ಕೊಡುತ್ತೇನೆ.

ಛೆ ಛೆ ವ್ಯಾಪಾರಮಾಡುವವರು ಜಾಣರು ಬಿಡಿ. ಲಾಭವಾಗುವುದಾದರೆ ಅವರು ಕನ್ನಡವನ್ನೂ ಕಲಿತುಬಿಡುತ್ತಾರೆ. ಐವತ್ತು ಮಿಲಿಯನ್‌, (ಐದು ಕೋಟಿ ನಮ್ಮ ಭಾಷೆಯಲ್ಲಿ) ಜನ ಕನ್ನಡವನ್ನು ಓದಿ ಬರೆಯಬಲ್ಲವರಾದರೆ ಕನ್ನಡದ ಬೋರ್ಡನ್ನು ಅವರು ಹಾಕುವುದು ಮಾತ್ರವಲ್ಲ, ಕನ್ನಡವನ್ನು ಬಳಸಲೂ ಶುರುಮಾಡುತ್ತಾರೆ- ಎನ್ನುತ್ತೇನೆ. ನಾವು ಇಂಗ್ಲಿಷ್‌ ಮಾತಾಡಿದಂತೆ ಅವರು ಕನ್ನಡ ಮಾತಾಡುತ್ತಾರೆ ಬಿಡಿ ಎನ್ನುತ್ತೇನೆ. ಈಗ ಕೂಡ ಇರುವುದು ಒಂದೇ ಕನ್ನಡವೆ? ಹಲವು ಕನ್ನಡಗಳು ಇಲ್ಲವೆ? ಇಂಗ್ಲಿಷರು ಸೂರ್ಯಮುಳುಗದ ಚಕ್ರಾಧಿಪತಿಗಳಾಗಿದ್ದವರು ಅಲ್ಲವೆ? ತಮ್ಮದೇ ಇಂಗ್ಲಿಷನ್ನು ಎಲ್ಲರೂ ಮಾತಾಡಬೇಕೆಂದು ಅವರು ಇಷ್ಟಪಟ್ಟರೂ ಎಲ್ಲೆಲ್ಲಿ ಸೋತರು ನೋಡಿ. ತಮ್ಮದೇ ಅಮೆರಿಕಾದಲ್ಲಿ. ಆಷ್ಟ್ರೇಲಿಯಾದಲ್ಲಿ. ಲಂಡನ್ನಿನಲ್ಲೇ ಅವರು ಸೋತರಲ್ಲವೆ? ಜಾರ್ಜ್‌ ಬರ್ನಾರ್ಡ್‌ ಶಾ ಯಾಕೆ ಪಿಗಮಾಲಿಯನ್‌ ಬರೆಯಬೇಕಾಯಿತು, ಯೋಚಿಸಿ.

ಇಂಗ್ಲಿಷ್‌ ಜೊತೆ ನನ್ನದೇ ಹೆಣಗಾಟದ ಹಲವು ಕಥೆಗಳಲ್ಲಿ ಒಂದನ್ನು ಈಗ ಹೇಳುತ್ತೇನೆ. ಅರವತ್ತರ ದಶಕದ ಪ್ರಾರಂಭದಲ್ಲಿ ನಾನು ಇಂಗ್ಲೆಂಡಿಗೆ ಓದಲು ಹೋದೆ. ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಧೀಮಂತ ಇತಿಹಾಸ ಪಂಡಿತ ಫಣಿಕ್ಕರ್‌ರವರು ಅನುಮತಿಕೇಳಲು ಅವರ ಬಳಿ ನಾನು ಹೋದಾಗ ಏನು ರಿಸರ್ಚ್‌ ಮಾಡಲು ಹೋಗುತ್ತಿದ್ದೀಯ ಎಂದು ಕೇಳಿದರು. ಲಾರೆನ್ಸ್‌ ಮೇಲೆ ಎಂದೆ.

ನಮ್ಮಲ್ಲೇ ಎಷ್ಟು ವಿಷಯವಿದೆ ಕಲಿಯಲು? ಕಾಳಿದಾಸ, ಭಾಸ, ಭವಭೂತಿ, ನಿಮ್ಮ ಭಾಷೆಯಲ್ಲೂ ಎಷ್ಟು ಸಾಹಿತಿಗಳು ಇವರನ್ನೆಲ್ಲ ಚೆನ್ನಾಗಿ ಓದಿಕೊಳ್ಳದೆ ಅಲ್ಲೇನು ನೀನು ಲಾರೆನ್ಸ್‌ ಮೇಲೆ ರಿಸರ್ಚ್‌ ಮಾಡಿ ಹೊಸದು ಹೇಳುವುದಿದೆ ಎಂದರು. ಏನೋ ಇದೆ ಎಂದು ತಿಳಿಯುವ ಆಧುನಿಕತೆಯ ಗರ್ವದ ಧಾಟಿಯಲ್ಲಿ ಗೌರವದಿಂದಲೇ ನಾನು ವಾದಿಸಿದೆ. ಫಣಿಕ್ಕರ್‌ ಒಳ್ಳೆಯದಾಗಲಿ ನಿನಗೆ ಎಂದು ರಜಾಕೊಟ್ಟರು.

ಬರ್ಮಿಂಗಂಗೆ ಸಂಸಾರ ಸಮೇತ ಹೋದೆ. ಹೊಸ ಸೂಟು, ಆಗಿನ ಘನತೆಯಸಂಕೇತವಾದ ಉಲ್ಲನ್ನಿನ ಪಿನ್‌ ಸ್ಟ್ರೈಪ್‌ ಸೂಟು, ಖುದ್ದಾಗಿ ಅಳತೆಕೊಟ್ಟು ಹೊಲಿಸಿಕೊಂಡು ತೊಟ್ಟೆ. ಅಲ್ಲಿ ನೋಡಿದರೆ ಎಲ್ಲರ ಗೌರವಕ್ಕೆ ಪಾತ್ರನಾದ ರಿಚರ್ಡ್‌ ಹಾಗರ್ಟ- ಕಾರ್ಮಿಕ ವರ್ಗದಿಂದ ಹುಟ್ಟಿಬಂದ ಮಹಾ ಪ್ರತಿಭಾಶಾಲಿ ಕಾರ್ಮಿಕರು ಹಾಕುವ ಟೋಪಿ ಹಾಕಿಕೊಂಡು ಮಾಸಿದ ಸೂಟು ತೊಟ್ಟು, ಟೈ ಇಲ್ಲದೆ ಬರುತ್ತಿದ್ದ. ಕ್ಲಾಸು ತೆಗೆದುಕೊಳ್ಳುವಾಗ ಮಾತ್ರ ಕಪ್ಪು ಗೌನನ್ನು ಹಾಕಿಕೊಂಡಿರುತ್ತಿದ್ದ. ಪಬ್ಬಿನಲ್ಲಿ ಕೂತು ವಿದ್ಯಾರ್ಥಿಗಳ ಜೊತೆ ಹರಟೆ ಹೊಡೆಯುತ್ತಿದ್ದ. ಇವನ uses of Literacy ಎನ್ನುವ ಪುಸ್ತಕ ಆಗ ಎಲ್ಲ ಧೀಮಂತರ- ರೇಮಂಡ್‌ ವಿಲಿಯಮ್ಸ್‌ ನಂಥವರ ಮೆಚ್ಚುಗೆ ಗಳಿಸಿತ್ತು.

ಇವರಿಗೆ ಹತ್ತಿರವಾಗುವುದು ನನ್ನ ಆಸೆಯಾದರೂ ಮೊದಲ ಆರು ತಿಂಗಳು ಇಂಗ್ಲಿಷ್‌ ಕಾಂಪೊಸಿಶನ್‌ ಕ್ಲಾಸಿಗೆ ನನ್ನನ್ನು ಕಳಿಸಿದರು. ಅದನ್ನೆಲ್ಲ ಎಂ ಎ ಮಾಡಿಹೋಗಿದ್ದ ನಾನು ಸಹಿಸಿಕೊಂಡೆ.

ಇಂಗ್ಲಿಷ್‌ ಪರಭಾಷೆಯಲ್ಲವೆ? ನಾನು ಕಲಿಯಬೇಕಾದ್ದು ಇರಬಹುದು ಎಂದುಕೊಂಡೆ. ಪಾಸಾದೆ. ಆಮೇಲೆ ಏನು ರಿಸರ್ಚ್‌ ಮಾಡಬಹುದೆಂದು ನನ್ನ ಟ್ಯೂಟರ್‌ನನ್ನು ಕೇಳಬೇಕಾಗಿತ್ತು. ಲಾರೆನ್ಸ್‌ ಮೇಲೆ ಹಲವರು ಬರೆದಾಗಿಬಿಟ್ಟಿದ್ದರಿಂದ ಹೆಚ್ಚೇನೂ ನನಗೆ ಹೇಳುವದು ಉಳಿದಿರಲಿಲ್ಲ. ಮುವ್ವತ್ತರ ದಶಕದ ಕೊನೆಯಲ್ಲಿ ಹಿಟ್ಲರನ ಯಮಪಾಶದಲ್ಲಿ ಇಡೀ ಯೂರೋಪೇ ಸಿಕ್ಕಿಬಿದ್ದಾಗ ಹುಟ್ಟಿದ ಆರ್ವಲ್‌, ಆಡೆನ್‌, ಇಶರ್ವುಡ್‌, ಇನ್ನೂ ಮುಖ್ಯವಾಗಿ ವಿಮರ್ಶಕರ ಕಣ್ಣಿಗೆ ಬೀಳದ ಎಡ್ವರ್ಡ್‌ ಅಪ್‌ವರ್ಡ್‌ ಎಂಬಾತನ ಬಗ್ಗೆ ನಾನು ರಿಸರ್ಚ್‌ ಮಾಡಬೇಕೆಂದುಕೊಂಡಿದ್ದ.

ಇಂಗ್ಲೆಂಡಿನಲ್ಲಿ ಆಗಾಗಲೇ ಕಾದಂಬರಿಕಾರನೆಂದೂ, ಹೊಸ ಚುರುಕಿನ ವಿಮರ್ಶಕನೆಂದೂ ಖ್ಯಾತನಾಗಿದ್ದ ಮಾಲ್ಕಂ ಬ್ರಾಡ್‌ ಬರಿಯೆಂಬಾತನ, ನನ್ನಷ್ಟೇ ವಯಸ್ಸಿನ ಆಧ್ಯಾಪಕನ, ಬೆಂಬಲವೂ ನನಗೆ ಇತ್ತು. ಆದರೆ ನನ್ನ ಟ್ಯೂಟರ್‌ ಇದನ್ನ ಒಪ್ಪಬೇಕಾಗಿತ್ತು. ಈತ ವಯಸ್ಸಾದವ; ಹಳೆಯಕಾಲದವ. ಒಳ್ಳೆಯ ಮನುಷ್ಯ. ಅವನು ಆಗತಾನೇ ಭಾರತದಲ್ಲಿ ಪ್ರವಾಸ ಮಾಡಿ ಬಂದಿದ್ದ. ನನಗೆ ಅವನ ಹಿರಿತನದ ಉಪದೇಶ ಹೀಗಿತ್ತು:

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more