ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಐಎಂ-ಎ’ ಹುಡುಗಿಗೆ ಕೋಟಿ ರೂಪಾಯಿ ಸಂಬಳ!?

By Staff
|
Google Oneindia Kannada News

ಮುಂಬಯಿ : ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌-ಅಹಮದಾಬಾದ್‌ನ ವಿದ್ಯಾರ್ಥಿನಿಯೋರ್ವಳು ಡಚ್‌ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿದ್ದು, ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಸಂಬಳ ಪಡೆಯಲಿದ್ದಾಳೆ.

23 ವರ್ಷದ ವಿನೀತಾ ಅವರು ಲಂಡನ್‌ನಲ್ಲಿ ಬ್ಯಾಂಕ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೆಲಸ ದೊರೆತ ಬಗ್ಗೆ ಹರ್ಷ ವ್ಯಕ್ತಪಡಿಸುವ ವಿನೀತಾ, ಇದೇ ಮೊದಲ ಸಲ ಹೊಸಬರಿಗೆ ಅಸೋಸಿಯೇಟ್‌ ಹುದ್ದೆಗಳನ್ನು ನೀಡಲಾಗುತ್ತಿದೆ. ಅಲ್ಲದೆ ಅವಕಾಶಗಳ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ.

ಐಐಎಂ ಪ್ಲೇಸ್‌ಮೆಂಟ್‌ ಸೀಸನ್‌(ಕೆಲಸದ ಸುಗ್ಗಿ) ಇನ್ನೂ ಎರಡು ತಿಂಗಳು ದೂರ ಇರುವಾಗಲೇ, ಪ್ಲೇಸ್‌ಮೆಂಟ್‌ ಪೂರ್ವ ಅವಕಾಶಗಳು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬರುತ್ತಿವೆ. ಇಲ್ಲಿಯತನಕ ಅಂತಾರಾಷ್ಟ್ರೀಯ ಬಿ-ಸ್ಕೂಲು(ವ್ಯಾಪಾರ ಕಲಿಸುವ ಶಾಲೆಗಳು)ಗಳಿಗೆ ಮಾತ್ರ ಮೀಸಲಿದ್ದ ಉದ್ಯೋಗಗಳು ಐಐಎಂ ಪದವೀಧರರಿಗೆ ಒಲಿದಿವೆ.

ಕಳೆದ ವರ್ಷ ಐಐಎಂ ಪದವೀಧರರಿಗೆ ಬಾರ್‌ಕ್ಲೇಸ್‌ ಕ್ಯಾಪಿಟಲ್‌ ಸಂಸ್ಥೆ ಮಾತ್ರ ಅಸೋಸಿಯೇಟ್‌ ಹುದ್ದೆಗಳನ್ನು ನೀಡಿತ್ತು. ಆದರೆ ಈ ವರ್ಷ ಡಚ್‌ ಬ್ಯಾಂಕ್‌, ಲೆಹ್‌ಮನ್‌ ಬ್ರದರ್ಸ್‌ ಸಂಸ್ಥೆಗಳೂ ಈ ಹುದ್ದೆಗಳನ್ನು ನೀಡಿವೆ.

ಐಐಎಂ ಅಹಮದಾಬಾದ್‌, ಬೆಂಗಳೂರು ಹಾಗೂ ಕೋಲ್ಕತಾ ಸೇರಿದಂತೆ ಒಟ್ಟು 10ಐಐಎಂ ವಿದ್ಯಾರ್ಥಿಗಳಿಗೆ ಡಚ್‌ ಬ್ಯಾಂಕ್‌ ಅಸೋಸಿಯೇಟ್‌ ಹುದ್ದೆಗಳನ್ನು ನೀಡಿದೆ. ಅವರ ಕನಿಷ್ಠ ವಾರ್ಷಿಕ ಸಂಬಳ 8ಲಕ್ಷ ರೂಪಾಯಿ, ಗರಿಷ್ಠ 1ಕೋಟಿ ರೂಪಾಯಿ.

ಅನೇಕ ಹೂಡಿಕೆ ಬ್ಯಾಂಕುಗಳು ಪ್ರತಿವರ್ಷ ಐಐಎಂ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿವೆ. ಈ ಬ್ಯಾಂಕುಗಳು ಅವರಿಗೆ ಉನ್ನತ ಹುದ್ದೆ ಹಾಗೂ ಅತ್ಯುತ್ತಮ ಸಂಬಳ ನೀಡುವ ಮೂಲಕ, ತಮ್ಮ ಸ್ಪರ್ಧಿಗಳಿಗಿಂತ ಮುನ್ನಡೆಯುವ ಯತ್ನದಲ್ಲಿವೆ. ಏನೇ ಆಗಲಿ ತಮಗೆ ಐಐಎಂ ಪದವೀಧರರೇ ಬೇಕು ಎಂಬ ಗುಂಗಿನಲ್ಲಿ ಕಂಪನಿಗಳು ತೇಲುತ್ತಿರುವುದು ಮಾತ್ರ ಸದ್ಯಕ್ಕೆ ದಿಟ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X