ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮಠಗಳಿಗೆ ನಮನ -ಶಿವರಾಜ್‌ ಪಾಟೀಲ್‌

By Staff
|
Google Oneindia Kannada News

ಬೆಂಗಳೂರು : ಕೇಂದ್ರ ಗೃಹಸಚಿವ ಶಿವರಾಜ್‌ ಪಾಟೀಲ್‌, ಕರ್ನಾಟಕದ ಮಠಗಳ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ನಗರದಲ್ಲಿ , ಮೈಸೂರಿನ ಸುತ್ತೂರು ಮಠದ ಶ್ರೀಶಿವರಾತ್ರೀಶ್ವರ ಭಗವತ್ಪಾದರ 1047ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕರ್ನಾಟಕದ ಅನೇಕ ಮಠಗಳು ಸಮೂಹಗಳಿಗೆ ಶಿಕ್ಷಣ ನೀಡುತ್ತಾ, ಸಮಾಜದ ಸಶಕ್ತೀಕರಣದಲ್ಲಿ ತೊಡಗಿವೆ. ಜಾತಿ, ಮತವೆನ್ನದೆ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಕಲ್ಯಾಣರಾಜ್ಯ ಕಟ್ಟಲು ತಮ್ಮದೇ ದಾರಿಯಲ್ಲಿ ನಡೆಯುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಇದನ್ನು ದೇಶದ ಯಾವುದೇ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಇನ್ನೂ ವೈಶಿಷ್ಟ್ಯವೆಂದರೆ ಈ ಮಠಗಳು ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ನೀಡುತ್ತಿವೆ ಎಂದು ಪ್ರಶಂಸಿಸಿದರು.

ಈ ಮಠಗಳು ಶಿಕ್ಷಣದ ಜೊತೆಯಲ್ಲೇ ವಿದ್ಯಾರ್ಥಿ ಸಮುದಾಯಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿವೆ. ಇದು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕರವೇ ಪ್ರತಿಭಟನೆ : ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹಸಚಿವ ಶಿವರಾಜ್‌ ಪಾಟೀಲ್‌ ಮಹಾರಾಷ್ಟ್ರಪರ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು.

ಪ್ರವೀಣ್‌ಕುಮಾರ್‌ ಶೆಟ್ಟಿ ನೇತೃತ್ವದ ತಂಡದ ಈ ಯತ್ನವನ್ನು ಪೊಲೀಸರು ವಿಫಲಗೊಳಿಸಿ, ಬಂಧಿಸಿದರು. ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X