ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹು ಆಯ್ಕೆ ಮಾದರಿ ಪ್ರಶ್ನೆ : ಬೆಂಗಳೂರು ವಿವಿ ಸಮ್ಮತಿ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ, 2008ನೇ ಸಾಲಿನಿಂದ ಪದವಿ ಕೋರ್ಸುಗಳಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಪರಿಚಯಿಸಲು ನಿರ್ಧರಿಸಿದೆ.

ಶನಿವಾರ(ಡಿಸೆಂಬರ್‌ 23) ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಸೆಪ್ಟೆಂಬರ್‌ 25ರಂದು ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆ ಈ ಕುರಿತು ತಾತ್ವಿಕ ಒಪ್ಪಿಗೆ ನೀಡಿತ್ತು.

ಹೊಸ ಪದ್ಧತಿ ಪ್ರಕಾರ, 2, 4 ಮತ್ತು 5ನೇ ಸೆಮಿಸ್ಟರ್‌ ಪ್ರಶ್ನೆ ಪತ್ರಿಕೆಗಳು ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಇತರ ಸೆಮಿಸ್ಟರ್‌ಗಳು ಸಾಂಪ್ರದಾಯಿಕವಾಗಿಯೇ ಮುಂದುವರಿಯಲಿವೆ. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಭಾಷಾ ಪತ್ರಿಕೆಗಳಿಗೆ ಹಾಗೂ ಎಲ್‌.ಎಲ್‌.ಬಿ, ಬಿ.ಇ, ಬಿ.ಎಡ್‌, ಬಿ.ಎಚ್‌.ಎಂ ಕೋರ್ಸುಗಳಿಗೆ ಹೊಸ ಪದ್ಧತಿ ಅನ್ವಯಿಸುವುದಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X