• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಪ್ರೊ ಅಂಗಳದಲ್ಲಂದು ಜೇನಿನ ಮಳೆ, ಕನ್ನಡದ ಹೊಳೆ...

By Staff
|


ಕನ್ನಡ ಕಂಪುಬೀರಿದ ವಿಪ್ರೊ ನೌಕರ ಸಮುದಾಯಕ್ಕೆ ದಟ್ಸ್‌ಕನ್ನಡ ಡಾಟ್‌ಕಾಮ್‌ ಶುಭಾಶಯಗಳು!

  • ಶಾಮಿ
Film director Kavitha Lankesh speaking at Wipro function - Image courtesy : cpcshekhar Yahoo Photo Gallery
Compering by Sanjeev Kulkarni - Image courtesy : cpcshekhar Yahoo Photo Gallery
Cheering Wipro Kannadigaru - Image courtesy : cpcshekhar Yahoo Photo Gallery
ಸಿಲಿಕಾನ್‌ ಕಣಿವೆಯಲ್ಲಿ ಕನ್ನಡಪ್ರೇಮ ಇಲ್ಲವೆಂದವರು ಯಾರು ? ಯಾರದು? ಶ್‌!

ಮೊನ್ನೆ ವಿಪ್ರೊ ಸಂಸ್ಥೆಯಲ್ಲಿ ಜರುಗಿದ ‘ವಿಸ್ಮಯ-06’ ಕಾರ್ಯಕ್ರಮದಲ್ಲಿ ಸೀಮೆಹಸು ಕರೆಯುವ ಹಾಲಿನ ಹೊಳೆ ಹರಿಯಿತು. ವಿಪ್ರೊದ ಬಯಲು ಆಲಯದಲ್ಲಿ ಅಂದು ಸಂಜೆ... ಜೇನಿನ ಹೊಳೆಯೋ ಹಾಲಿನ ಮಳೆಯಾ ಸುಧೆಯಾ ಕನ್ನಡ ಸವಿನುಡಿಯೋ...ವಾಣಿಯ ವೀಣೆಯ ಸ್ವರಮಾಧುರ್ಯವೋ....ಸುಮಧುರ ಸುಂದರ ನುಡಿಯೋ..

ವಾರಾಂತ್ಯಗಳಲ್ಲಿ ನಡೆಯುವ ಮಾಮೂಲಿ ಪಾರ್ಟಿಗಳಿಗೂ, ಸುವರ್ಣ ಕರ್ನಾಟಕ ರಾಜ್ಯೋತ್ಸವದ ನೆಪದಲ್ಲಿ ಅಪ್ಪಟ ಕನ್ನಡ ವಾತಾವರಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಇರುವ ವ್ಯತ್ಯಾಸಕ್ಕೆ ಇಡೀ ವಿಪ್ರೊ ಸಾಕ್ಷಿಯಾಯಿತು. ಕೋಡು, ಪ್ರೊಗ್ರಾಮು, ಕ್ವಾರ್‌ಟರ್‌ಲಿ ರಿಸಲ್ಟ್‌ಗಳ ತರಂಗಾಂತರಂಗಳಲ್ಲಿ ಅನುದಿನ ಮುಳುಗೇಳುವ ವಿಪ್ರೊ ಸಿಬ್ಬಂದಿ ವರ್ಗ , ಆ ದಿನ ಕನ್ನಡ ಮಾತು, ಕನ್ನಡ ಗೀತೆ, ಕನ್ನಡ ಭಾಷಣ , ಕನ್ನಡ ಚರ್ಚೆ ಮಾಡುವುದರ ಜತೆಗೆ ಕನ್ನಡದಲ್ಲಿ ಮಾತನಾಡಿದರು, ಕನ್ನಡದಲ್ಲೇ ನಕ್ಕರು. ವಿಪ್ರೊ ನೌಕರ ಸಮುದಾಯಕ್ಕೆ ದಟ್ಸ್‌ಕನ್ನಡ.ಡಾಟ್‌ಕಾಮ್‌ ಶುಭಾಶಯಗಳು!

ವಿಪ್ರೊ ಸಿಬ್ಬಂದಿ ವರ್ಗದ ವತಿಯಿಂದ ಕನ್ನಡತನ ಧ್ವನಿಸುವ ಅನೇಕಾರು, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಿದವು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟೀವಿ ಮಾತುಗಾರ ಸಂಜೀವ ಕುಲಕರ್ಣಿ ಮತ್ತು ನಿರ್ದೇಶಕಿ ಕವಿತಾ ಲಂಕೇಶ್‌ ಹದವಾಗಿ ಮಾತನಾಡಿ, ವಿಪ್ರೊ ನೌಕರರ ಕನ್ನಡ ಮನಸ್ಸುಗಳಿಗೆ ಕಚಗುಳಿಯಿಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more