ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಒಂದು ಲಕ್ಷದ ಕಾರು ಬೇಕಾ?

By Staff
|
Google Oneindia Kannada News

ಟಾಟಾ ಕಂಪನಿಯಿಂದ ಎಷ್ಟೊ ದಿನಗಳಿಂದ ಕಾಯುತ್ತಿದ್ದ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸು ನನಸಾಗುತ್ತಿದೆ. ಆದರೆ..

  • ಚಂದ್ರಮ
You Want to Buy a Rs.1 lakh Car?ಟಾಟಾ ಕಂಪನಿಯವರು 2008ರ ವೇಳೆಗೆ, ಕೇವಲ 1 ಲಕ್ಷದಲ್ಲಿ ನಿಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಲಿದ್ದಾರೆ. ಪಾರ್ಕಿಂಗ್‌ಗೆ ಜಾಗ ಮಾಡಿ-ಕೊಂಡಿರಿ.

ಈ ಕಾರು ನಿಮಗೂ ಬೇಕಾ? ನನಗಂತೂ ಬೇಕು. ಯಾರಿಗೆ ಬೇಡ ಹೇಳಿ. ಕೇವಲ ಒಂದು ಲಕ್ಷದಲ್ಲಿ ಅಂದರೆ ಜನ ಸಾಲುಗಟ್ಟಿ ನಿಂತು ತೆಗೆದುಕೊಳ್ಳುತ್ತಾರೆ. ಏಕೆಂದರೆ ಈಗ ಒಂದು ಬೈಕಿನ ಕಿಮ್ಮತ್ತೆ ಹತ್ತಿರ ಹತ್ತಿರ 1 ಲಕ್ಷವಾಗಿದೆ. ಈಗ ಮಾರ್ಕೆಟ್ಟಿನಲ್ಲಿ ಒಂದು ಕಾರಿನ ಬೆಲೆ 3 ಲಕ್ಷಕ್ಕಿಂತ ಕಡಿಮೆ ಇಲ್ಲ. 2 ಲಕ್ಷ ಕಡಿಮೆಗೆ ಸಿಗುತ್ತದೆಯೆಂದರೆ ಯಾರಿಗೆ ಬೇಡ.

ಎಷ್ಟೊ ದಿನಗಳಿಂದ ಕಾಯುತ್ತಿದ್ದ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸು ನನಸಾಗುತ್ತಿದೆ. ಆದರೆ ಈ 1 ಲಕ್ಷದ ಕಾರು ಮಾರ್ಕೆಟ್ಟಿಗೆ ಬಂದರೆ ಏನಾಗುತ್ತೆ ಎಂದು ಯೋಚಿಸಿದರೆ ಈ ಕೆಳಗಿನ ವಿಷಯಗಳು ಭಯ ತರಿಸುತ್ತವೆ.

ಈ ಸಂಗತಿಗಳ ಗಮನಿಸಿ -

  • ತುಂಬಾ ಜನ ಈ ಕಾರನ್ನು ಕೊಳ್ಳುವುದರಿಂದ ಟ್ರಾಫಿಕ್‌ ಜಾಸ್ತಿಯಾಗುತ್ತೆ. ಪಟ್ಟಣಗಳಲ್ಲಿ ಮೊದಲೆ ಟ್ರಾಫಿಕ್‌ ಒಂದು ದೊಡ್ಡ ತಲೆನೋವಾಗಿದೆ. ರಸ್ತೆಗಳಂತೂ ಮೊದಲೇ ಸರಿಯಿಲ್ಲ.
  • ಪಾರ್ಕಿಂಗ್‌ ಇನ್ನೊಂದು ದೊಡ್ಡ ತಲೆನೋವಾಗುವದು. ಈಗಲೇ ಬೆಂಗಳೂರಿನ ಎಂ.ಜಿ ರೋಡಿನಲ್ಲಿ ಪಾರ್ಕ್‌ ಮಾಡಬೇಕಾದರೆ ಐದಾರು ಕಿ.ಮೀ ದೂರ ಹೊಗಬೇಕಾಗುತ್ತದೆ.
  • ಅಪಘಾತಗಳು ಹೆಚ್ಚಾಗುತ್ತವೆ. ಯಾಕೆಂದರೆ ನಮ್ಮ ದೇಶದಲ್ಲಿ ಯಾರೂ ರಸ್ತೆ ನಿಯಮಗಳನ್ನು ಪಾಲಿಸುವುದಿಲ್ಲ.
  • ಮೊದಲೆ ಕಲುಷಿತವಾಗಿರುವ ಗಾಳಿ, ಇನ್ನಷ್ಟು ಕಲುಷಿತವಾಗುತ್ತದೆ.
  • 1 ಲಕ್ಷದ ಕಾರೆಂದ ಮೇಲೆ, ಮೈಲೇಜ್‌ ಕಡಿಮೆ ಇರಬಹುದು. ಇದರಿಂದ ಇನ್ನಷ್ಟು ಪೆಟ್ರೋಲ್‌, ಡೀಸೆಲ್‌ ಗ್ಯಾಸ್‌ ಬೇಕಾಗುವದು. ಬೇಡಿಕೆ ಹೆಚ್ಚು, ಸರಬರಾಜು ಕಡಿಮೆಯಾಗುವುದರಿಂದ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಇನ್ನಷ್ಟು ಹೆಚ್ಚಾಗುವುದು.
  • ಕೇವಲ 1 ಲಕ್ಷ ಎಂದ ಮೇಲೆ ಕಾರಿನ ಗುಣಮಟ್ಟ ಹೇಗಿರುತ್ತದೆ ಎಂಬ ಊಹೆ ನಿಮಗೆ ಬಿಟ್ಟ-ದ್ದು.
ಇದೆಲ್ಲಾ ನೋಡಿದರೆ ನಮಗೆ ನಿಜವಾಗಿಯೂ 1 ಲಕ್ಷದ ಕಾರು ಬೇಕಾ ಎನಿಸುತ್ತದೆ. ನಿಮಗೇನನ್ನಿಸುತ್ತದೆ?

ಲಾಸ್ಟ್‌ ಪಂಚ್‌ :

1 ಲಕ್ಷಕ್ಕಿಂತ ಕಡಿಮೆ ಬೆಲೆಬಾಳುವ ಕಾರು ಹೇಗಿರುತ್ತೆ?

-ಎಕ್ಸಲರೇಟರ್‌,ಬ್ರೇಕ್‌ ಮತ್ತು ಕ್ಲಚ್‌ ಜಾಗದಲ್ಲಿ ಪೆಡಲ್ಲುಗಳಿರುತ್ತವೆ! ಬೇಕಾದ್ರೆ ಪಕ್ಕದಲ್ಲೂ ಹಾಕಿಸಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X