ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಲೂ-ರಾಬ್ಡಿ ದಂಪತಿಗಳಿಗೆ ಹಾಲು ಕುಡಿದಷ್ಟು ಸಂತಸ!
ಪಾಟ್ನಾ : ಮೇವು ಹಗರಣಕ್ಕೆ ಪೂರಕವಾದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ, ರಾಷ್ಟ್ರೀಯ ಜನತಾದಳ ನಾಯಕ-ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ಡಿದೇವಿ ಖುಲಾಸೆಗೊಂಡಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಮುನಿಲಾಲ್ ಪಾಸ್ವಾನ್, ಸೋಮವಾರ ಈ ಕುರಿತ ತೀರ್ಪು ಪ್ರಕಟಿಸಿದರು. ಜನರಿಂದ ಕಿಕ್ಕಿರಿದಿದ್ದ ನ್ಯಾಯಾಲಯದ ಕೋಣೆಯಲ್ಲಿ ಲಾಲೂ ದಂಪತಿಗಳು ಉಪಸ್ಥಿತರಿದ್ದರು.
ಲಾಲೂ ಹಾಗೂ ರಾಬ್ಡಿ ಅವರುಗಳು 46,26,826 ರೂಪಾಯಿ 87ಪೈಸೆಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು.
(ಯುಎನ್ಐ)
Comments
Story first published: Monday, December 18, 2006, 23:53 [IST]