• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬ್ದುಲ್‌ ಕಲಾಂ ಕಾರಿನ ಹಿಂದೆ ಮುಂದೆ 48 ಕಾರುಗಳು!

By Staff
|


ಬೆಂಗಳೂರು : ಹೊಸೂರು ರಸ್ತೆಯ ಒಂದು ಬದಿ ಸಾಲೋಸಾಲು ವಾಹನಗಳು, ಇನ್ನೊಂದು ಬದಿ ನರಪಿಳ್ಳೆಯೂ (ಪೊಲೀಸರ ಹೊರತಾಗಿ) ಇಲ್ಲದ ಖಾಲಿಖಾಲಿ ರಸ್ತೆ.

ಇದು ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿ ವಾಪಸು ಬರುತ್ತಿರುವಾಗ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಸೋಮವಾರ ಮಧ್ಯಾಹ್ನ ಕಂಡುಬಂದ ದೃಶ್ಯ.

ರಾಷ್ಟ್ರಪತಿಯವರಿದ್ದ ವಾಹನವೂ ಸೇರಿ ಅವರ ಹಿಂದು ಮುಂದೆ ಅನಾಮತ್ತು 49 ವಾಹನಗಳು. ಅವರು ಆ ಮಾರ್ಗ ದಾಟಿ ಹೋಗುವ ತನಕ ಸುಮಾರು ಹದಿನೈದು ನಿಮಿಷ ಇನ್ನೊಂದು ಬದಿಯಲ್ಲಿ ಜನರು ವಾಹನದಲ್ಲಿಯೇ ಕುಳಿತು ದೇಶದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದರು.

ಮುಗಿಯದ ರಗಳೆ! : ವಿವಿಐಪಿಗಳು ಬೆಂಗಳೂರಿಗೆ ಬಂದಾಗ ನಾರಾಯಣ ಹೃದಯಾಲಯಕ್ಕೋ, ಇನ್ಫೋಸಿಸ್ಸಿಗೋ ಹೋಗುವಾಗ ಇಂದು ಉಂಟಾದ ಸ್ಥಿತಿ ತಪ್ಪಿದ್ದಲ್ಲ. ವಾಹನದಟ್ಟಣೆ, ಟ್ರಾಫಿಕ್‌ ಜಾಮ್‌ ಈ ರಸ್ತೆಯಲ್ಲಿ ಓಡಾಡುವವರಿಗೆ ಹೊಸದಲ್ಲ, ಅವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ.

ಭಾರೀ ವಾಹನಗಳಿಗೆ ವೇಳೆಯನ್ನು ನಿಗದಿಪಡಿಸಿದ್ದರೂ, ಫ್ಲೈಓವರುಗಳ ಮೇಲೆ ಫ್ಲೈಓವರುಗಳನ್ನು ನಿರ್ಮಿಸುತ್ತಿದ್ದರೂ ಟ್ರಾಫಿಕ್‌ ನಿಯಂತ್ರಣ ಹಿಡಿತಕ್ಕೆ ಬಂದಿಲ್ಲ. ಸಿಲ್ಕ್‌ ಬೋರ್ಡ್‌ನಿಂದ ಎಲೆಕ್ಟ್ರಾನಿಕ್‌ ಸಿಟಿಯವರೆಗೂ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ. ಚರಂಡಿಗಳನ್ನು ಮುಚ್ಚಿ ಮುಖ್ಯರಸ್ತೆಯನ್ನೂ ಸರ್ವಿಸ್‌ ರಸ್ತೆಯನ್ನೂ ಒಂದುಗೊಳಿಸಿ ರಸ್ತೆ ಅಗಲೀಕರಣ ಮಾಡುವ ಕೆಲಸ, ವಾಹನ ಸರಿದಾಟಗಳ ನಡುವೆ ಸಾಗಿದೆ.

ವಿಐಪಿ, ವಿವಿಐಪಿಗಳು ಬಂದಾಗ ಅವರನ್ನು ವಾಯುಮಾರ್ಗದಲ್ಲಿ ಅವರು ಸೇರಬೇಕಾದ ಜಾಗ ತಲುಪಿಸುವ ವಿಚಾರ ವಿಚಾರವಾಗಿಯೇ ಉಳಿದಿದೆ.

ಇನ್ನೊಂದೆಡೆ ತುಂಬಿತುಳುಕುವ ಬಸ್ಸಿನಲ್ಲಿ ಕುಳಿತು ಕಚೇರಿಯನ್ನು ತಕ್ಕ ಸಮಯದಲ್ಲಿ ತಲುಪುವುದು ಕಷ್ಟಸಾಧ್ಯವೆಂದು ಬೈಕು, ಕಾರುಗಳಿಗೆ ಶರಣಾಗಿ ವಾಹನ ದಟ್ಟಣೆ ವಿಪರೀತವಾಗಿರುವುದರಿಂದ ಸದ್ಯಕ್ಕೆ ಹೊಸುರು ರಸ್ತೆಗೆ ಇಂಥ ಪರಿಸ್ಥಿತಿಯಿಂದ ಸದ್ಯಕ್ಕಂತೂ ಮುಕ್ತಿ ಇಲ್ಲ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more