ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಕಡೆ ಡಕಾಯಿತಿ, ಸಾವಿರಾರು ರೂಪಾಯಿ ಲೂಟಿ

By Staff
|
Google Oneindia Kannada News

ಹುಬ್ಬಳ್ಳಿ : 10 ಜನ ಡಕಾಯಿತರ ತಂಡ ಎರಡು ಕಡೆ ದಾಳಿ ನಡೆಸಿ, ನಗನಾಣ್ಯ ಲೂಟಿ ಮಾಡಿಕೊಂಡು ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ನಸುಕಿನಲ್ಲಿ ಈ ಪ್ರತ್ಯೇಕ ಘಟನೆಗಳು ನಡೆದಿವೆ. ಕಬ್ಬಲಗೇರಿ ಗ್ರಾಮದ ಗೋನಪ್ಪ ಪೂಜಾರಿ ಎಂಬವರ ಮನೆ ಮೇಲೆ ದಾಳಿ ನಡೆಸಿ, ಚಿನ್ನಾಭರಣ ಸೇರಿದಂತೆ ಒಟ್ಟು 58,000ರೂಪಾಯಿ ಮೌಲ್ಯದ ನಗನಾಣ್ಯ ಲೂಟಿ ಮಾಡಿದ್ದಾರೆ. ಆನಂತರ ಇದೇ ತಂಡ ಬದಾಮಿ ತಾಲ್ಲೂಕಿನ ಫಾರ್ಮ್‌ ಹೌಸೊಂದರ ಮೇಲೆ ದಾಳಿ ನಡೆಸಿ, 34,000ರೂಪಾಯಿ ಮೌಲ್ಯದ ನಗನಾಣ್ಯ ಲೂಟಿ ಮಾಡಿದ್ದಾರೆ.

ಲೂಟಿ ಸಂದರ್ಭದಲ್ಲಿ ಲೂಟಿಕೋರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು, ವಿಜಾಪುರ ಶೈಲಿಯ ಕನ್ನಡ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X