ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನನಿಲ್ದಾಣಕ್ಕೆ ‘ಕುವೆಂಪು’ ಹೆಸರಿಡಿ : ಜಿಎಸ್ಸೆಸ್‌ ಸಲಹೆ

By Staff
|
Google Oneindia Kannada News

GS Shivarudrappa felicitated by Karnataka govtಬೆಂಗಳೂರು : ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಬೇಕೆಂದು, ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಸಲಹೆ ನೀಡಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರಕವಿ ಪ್ರಶಸ್ತಿ ಸ್ವೀಕರಿಸಿದ ಅವರು, ವಿಶ್ವಮಾನವ ಸಂದೇಶದಿಂದ ಕುವೆಂಪು ಸರ್ವಮಾನ್ಯರು. ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನಿಡುವುದು ಅತ್ಯಂತ ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್‌ ಕಲಿಕೆಗೆ ಅವಸರ ಬೇಡ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಶಿವರುದ್ರಪ್ಪ, ಕನ್ನಡ ಭಾಷೆಯ ಬೆಳವಣಿಕೆಗೆ ಪೂರಕವಾದಗ ಸಂಗತಿಗಳನ್ನು ಪ್ರಸ್ತಾಪಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರರು ಹಾಜರಿದ್ದರು. ಜಿ.ಎಸ್‌.ಎಸ್‌ ಗೀತೆಗಳ ಗಾಯನ ಈ ಸಂದರ್ಭದಲ್ಲಿ ನಡೆಯಿತು.

ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೂರನೇ ಕವಿ ಎಂಬ ಹೆಗ್ಗಳಿಕೆಗೆ ಶಿವರುದ್ರಪ್ಪ ಪಾತ್ರರಾಗಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X