ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಮೊಬೈಲ್‌ನಲ್ಲಿ ನೆಚ್ಚಿನ ನ್ಯೂಸ್‌ ಪೇಪರ್‌ ಲಭ್ಯ!

By Staff
|
Google Oneindia Kannada News

ನವದೆಹಲಿ : ಹಾಡುಗಳು, ಸಿನಿಮಾಗಳು ಮತ್ತು ಆಟಗಳು ಮೊಬೈಲ್‌ನಲ್ಲಿ ಕಂಡು ಬೇಸತ್ತವರಿಗೆ, ದಿನಪತ್ರಿಕೆಯನ್ನು ನೀಡುವ ಪ್ರಯತ್ನಗಳು ಇದೀಗ ನಡೆದಿವೆ.

ಮೊಬೈಲ್‌ ಫೋನ್‌ಗಳಿಗೆ ಸೇವೆ ಒದಗಿಸುತ್ತಿರುವ ಸೆಲ್‌ನೆಕ್ಸ್ಟ್‌ ಸಲ್ಯೂಷನ್ಸ್‌ ಹೊಸ ತಂತ್ರಜ್ಞಾನವನ್ನು ರೂಪಿಸಿದ್ದು, ಈ ಪರಿಣಾಮ ಮೊಬೈಲ್‌ನಲ್ಲಿ ದಿನಪತ್ರಿಕೆಗಳನ್ನು ಓದಲು ಸಾಧ್ಯವಾಗುತ್ತದೆ. ಈ ಸೆಲ್‌ ಪೇಪರ್‌ ಜನಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸೆಲ್‌ನೆಕ್ಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ವೈಷ್ಣವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನೊಂದು ತಿಂಗಳಲ್ಲಿ ಈ ಸೇವೆ ಜಾರಿಗೆ ಬರಲಿದೆ. ಆರಂಭದಲ್ಲಿ ಇಂಗ್ಲಿಷ್‌ ಪತ್ರಿಕೆಗಳನ್ನು ಮಾತ್ರ ಓದಬಹುದು. ನಂತರದ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಸೇವೆ ಲಭ್ಯ ಎಂದು ವೈಷ್ಣವಿ ಮಾಹಿತಿ ನೀಡಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X