• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೇಖರ್‌ ಪೂರ್ಣ ಕನ್ನಡ ಸೇವೆಗೆ ಪಿ.ಶೇಷಾದ್ರಿ ಮೆಚ್ಚುಗೆ

By Staff
|


ತುಮಕೂರು : ‘ಬರಹ‘ ತಂತ್ರಾಂಶವನ್ನು ಉಚಿತವಾಗಿ ನೀಡಿದ ಶೇಷಾದ್ರಿವಾಸು ಚಂದ್ರಶೇಖರನ್‌ ಮತ್ತು ಕನ್ನಡ ಸಾಹಿತ್ಯ ಡಾಟ್‌ ಕಾಮ್‌ ರೂಪಿಸಿ ಕನ್ನಡ ಸಾಹಿತ್ಯದ ಕಂಪನ್ನು ಜಗತ್ತಿಗೆ ಪರಿಚಯಿಸುತ್ತಿರುವ ಶೇಖರ್‌ ಪೂರ್ಣ ಅವರದು ಬಹುದೊಡ್ಡ ಕನ್ನಡ ಸೇವೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಪ್ರಶಂಸಿಸಿದರು.

ಅವರು ಇತ್ತೀಚೆಗೆ ನಗರದಲ್ಲಿ ಕನ್ನಡ ಸಾಹಿತ್ಯ ಡಾಟ್‌ ಕಾಮ್‌ನ ತುಮಕೂರು ಬೆಂಬಲಿಗರ ಬಳಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನೂರಾರು ಕೃತಿಗಳು : ಇಂದು 90ಕ್ಕೂ ಹೆಚ್ಚು ಕನ್ನಡದ ಬರಹಗಾರರ 300ಕ್ಕೂ ಅಧಿಕ ಕೃತಿಗಳು ವೆಬ್‌ಸೈಟ್‌ ಮೂಲಕ ಇಡೀ ಜಗತ್ತಿಗೇ ಲಭ್ಯವಾಗುವಂತೆ ಮಾಡಿರುವುದು ಕನ್ನಡ ಸಾಹಿತ್ಯ ಡಾಟ್‌ ಕಾಮ್‌ನ ಅದ್ಭುತ ಸಾಧನೆಯಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಇಂಟರ್‌ ನೆಟ್‌ ಮೂಲಕ ಈ ಕೃತಿಗಳನ್ನು ಓದಬಹುದಾಗಿದೆ ಎಂದು ಹೇಳಿದರು.

ಜಗತ್ತಿನಲ್ಲಿ ವೇಗವಾಗಿ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವರದಿಯಾಂದನ್ನು ಉಲ್ಲೇಖಿಸಿದ ಶೇಷಾದ್ರಿ, ಇಂದು ಕರ್ನಾಟಕ ಸರ್ಕಾರವು ಎಲ್ಲ ಪ್ರಾಥಮಿಕ ಶಾಲೆಗಳ ಕಂಪ್ಯೂಟರ್‌ಗಳಲ್ಲೂ ಉಚಿತವಾಗಿ ಲಭ್ಯವಿರುವ ಬರಹ ಮತ್ತು ನುಡಿ ತಂತ್ರಾಂಶಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸರ್ಕಾರದ ಜವಾಬ್ದಾರಿ : ಕನ್ನಡ ಸಾಹಿತ್ಯ ಡಾಟ್‌ ಕಾಮ್‌ನ ಸಂಸ್ಥಾಪಕರೂ, ಸಂಪಾದಕರೂ ಆದ ಶೇಖರ್‌ ಪೂರ್ಣ ಅವರು ಮಾತನಾಡಿ, ಕಂಪ್ಯೂಟರ್‌ ಮಾಧ್ಯಮದಲ್ಲಿ ಇಂದು ಕನ್ನಡ ಮೃತ ಭಾಷೆಯಾಗಿದೆ ಎಂದು ಆತಂಕದಿಂದ ನುಡಿದರು.

ಕನ್ನಡದಲ್ಲಿ ಇನ್ನೂ ಹೊಸ ತಂತ್ರಾಂಶಗಳು ರೂಪುಗೊಳ್ಳಬೇಕಿದ್ದು, ತಂತ್ರಜ್ಞರು ಹಾಗೂ ತಾಂತ್ರಿಕ ಕಾಲೇಜುಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳಬೇಕಿದೆ. ಪ್ರಾಥಮಿಕ ಶಾಲೆಯಲ್ಲೇ ಕನ್ನಡ ಪರಿಸರ ರೂಪಿಸಿ, ಕಂಪ್ಯೂಟರ್‌ನಲ್ಲಿ ಕನ್ನಡ ಸಾಧ್ಯತೆಗಳನ್ನು ಮಕ್ಕಳ ಮುಂದೆ ತೆರೆದಿಡಬೇಕು. ಬರಹ ಮತ್ತು ನುಡಿ ತಂತ್ರಾಂಶವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡದ ಇವೆರಡು ಉಚಿತ ತಂತ್ರಾಂಶಗಳನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ।। ಕರುಣಾಕರ್‌ ಅವರು ಮಾತನಾಡಿ, ತಮ್ಮ ಕಾಲೇಜಿನಲ್ಲಿ ಈಗಾಗಲೇ ಕನ್ನಡ ಬ್ರೌಸ್‌ ಬಗ್ಗೆ ಸಂಶೋಧನೆ ಮಾಡಿದ್ದು, ಅದು ಪ್ರಗತಿಯ ಹಂತದಲ್ಲಿದೆ ಎಂದರು.

ಪ್ರಜಾಪ್ರಗತಿ ಸಂಪಾದಕರಾದ ಎಸ್‌. ನಾಗಣ್ಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಆರ್‌.ಎಸ್‌.ಸದಾನಂದ, ನೀರಾವರಿ ತಜ್ಞ ಸಂಪಿಗೆ ಜಗದೀಶ್‌, ಎಚ್‌.ಎಂ.ಎಸ್‌. ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ।। ಎಸ್‌. ಕೆ. ನಾರಾಯಣ, ಎಸ್‌.ಬಿ.ಎಂ. ಅಧಿಕಾರಿಗಳ ಒಕ್ಕೂಟದ ಕೊಪ್ಪಲ್‌ ನಾಗರಾಜ್‌, ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್‌ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ನಿರ್ದೇಶಕರಾದ ಡಾ।। ಎಂ.ಎನ್‌. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಂತ್ರಜ್ಞ ಅರೆಹಳ್ಳಿ ರವಿ ಅವರು ಬರಹ ಬಗ್ಗೆ ಪ್ರಾತ್ಯಕ್ಷತೆಯಾಂದಿಗೆ ವಿವರಿಸಿದರು. ಸಂಚಾಲಕರಾದ ಎಂ.ಎನ್‌. ಕೋಟೆ ನಾಗಭೂಷಣ್‌ ಸ್ವಾಗತಿಸಿದರು. ಸಂಚಾಲಕ ಆರ್‌.ಎಸ್‌. ಅಯ್ಯರ್‌ ಕಾರ್ಯಕ್ರಮ ನಿರೂಪಿಸಿದರು.

ಹಾಲಿ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಿವಾಸಿ ಸಿ.ವಿ. ಸತೀಶ್‌ ಅವರು ಸ್ವಯಂ ಆಸಕ್ತಿಯಿಂದ ಆಗಮಿಸಿ, ಮಾತನಾಡಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ನೂರಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು.
(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more