ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರೇ, ಗುರ್ತಿನ ಚೀಟಿ ಪಡೆದಿರುವಿರಾ?

By Staff
|
Google Oneindia Kannada News

ಬೆಂಗಳೂರು : ಹಿರಿಯ ನಾಗರಿಕರಿಗೆ ಗುರುತಿನ ಚೀಟಿ(ಐಡೆಂಟಿಟಿ ಕಾರ್ಡ್‌) ವಿತರಿಸಲು ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಹಿರಿಯ ನಾಗರಿಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಿನಾಯ್ತಿಗಳನ್ನು ಪಡೆಯಲು, ಸರ್ಕಾರದಿಂದ ಅನುಮೋದಿತವಾದ ಕಾರ್ಡುಗಳನ್ನು ಪಡೆಯಬೇಕು. ಈ ಯೋಜನೆಗೆ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದಮೂರ್ತಿ ಮಂಗಳವಾರ ಚಾಲನೆ ನೀಡಿದ್ದಾರೆ.

ಈ ಸೌಲಭ್ಯ ಪಡೆಯಲಿಚ್ಛಿಸುವವರು , ಆರ್‌.ಟಿ.ನಗರ, ಮಲ್ಲೇಶ್ವರಂ ಹಾಗೂ ಶಾಂತಿನಗರದಲ್ಲಿರುವ ನೈಟಿಂಗೇಲ್ಸ್‌ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಅರ್ಜಿಯಾಂದಿಗೆ ವಯಸ್ಸಿನ ದಾಖಲೆ ಹಾಗೂ ಎರಡು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳನ್ನು ನೀಡಬೇಕು. ಗುರುತಿನ ಚೀಟಿ ಬೆಲೆ 25ರೂಪಾಯಿ ಮಾತ್ರ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :

ಹಿರಿಯರ ಸಹಾಯವಾಣಿ-1090 ಅಥವಾ ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌-23548444, 23548555.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X