ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಏಷ್ಯಾದ ಭಾಷೆಗಳು : ಮೈಸೂರಿನಲ್ಲಿ ಅಧಿವೇಶನ

By Staff
|
Google Oneindia Kannada News

ಬೆಂಗಳೂರು : ಸೌತ್‌ ಏಷಿಯನ್‌ ಲಾಂಗ್ವೆಜ್‌ ಅನಾಲಿಸಿಸ್‌(SALA)ನ 26ನೇ ಅಂತಾರಾಷ್ಟ್ರೀಯ ಅಧಿವೇಶನವು ಇದೇ ಡಿಸೆಂಬರ್‌ 19ರಿಂದ 21ರವರೆಗೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಡೆಯಲಿದೆ.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ರೈ, ಅಧಿವೇಶನದ ಸಂಯೋಜಕ ಲಿಂಗದೇವರು ಹಳೇಮನೆ ಮತ್ತು ಮೈಸೂರಿನ ಸಿಐಎಲ್‌ ನಿರ್ದೇಶಕ ಡಾ.ಉದಯ್‌ ನಾರಾಯಣ್‌ ಸಿಂಗ್‌ ಮಾಹಿತಿ ನೀಡಿದರು.

ಅಧಿವೇಶನದ ವಿಶೇಷತೆಗಳು :

  • ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಭಾರತೀಯ ಭಾಷಾ ಸಂಸ್ಥಾನ ಇವೆರಡೂ ಒಟ್ಟಾಗಿ ಸೇರಿ ಈ ಅಧಿವೇಶನವನ್ನು ಸಂಯೋಜಿಸುತ್ತಿವೆ. ಸಾಮಾನ್ಯವಾಗಿ ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಅಧಿವೇಶನ ಭಾರತದಲ್ಲಿ ಈಗ ಎರಡನೆಯ ಬಾರಿಗೆ ನಡೆಯುತ್ತಿದೆ.
  • ಭಾಷಾಶಾಸ್ತ್ರಜ್ಞರು ದಕ್ಷಿಣ ಏಷಿಯಾವನ್ನು ಒಂದು ಭಾಷಾ ಪ್ರದೇಶವೆಂದು ಪರಿಗಣಿಸುತ್ತಾರೆ. ಈ ಭೂಭಾಗದ ದೇಶಗಳ ಭಾಷೆಗಳಿಗೆ ಬಲು ದೀರ್ಘವಾದ ಇತಿಹಾಸವಿದೆ. ಈ ಭಾಷೆಗಳಲ್ಲಿರುವ ಹಲವಾರು ಭಾಷಿಕ ಮಾಹಿತಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀವ್ರ ಕುತೂಹಲವನ್ನು ತಂದಿವೆ. ಆಧುನಿಕತೆಯು ಈ ಭಾಷೆಗಳಿಗೆ ಹೊಸ ಬಗೆಯ ಸವಾಲನ್ನು ಎಸೆದಿದೆ. ಈ ಸವಾಲುಗಳನ್ನು ಎದುರಿಸಲು ಈ ಪ್ರದೇಶದ ಭಾಷೆಗಳು ರೂಪಿಸಿಕೊಂಡಿರುವ ವಿವಿಧ ಬಗೆಯ ತಂತ್ರಗಳೂ ಕೂಡ ಅಭ್ಯಾಸ ಯೋಗ್ಯವಾಗಿವೆ. ಈ ಬಗ್ಗೆ ಅಧಿವೇಶನದಲ್ಲಿ ಬೆಳಕು ಚೆಲ್ಲಲಾಗುತ್ತದೆ.
  • ಈ ವರ್ಷ ಈ ಸಮ್ಮೇಳನದಲ್ಲಿ 106 ಜನ ವಿದ್ವಾಂಸರು ತಮ್ಮ ಅಧ್ಯಯನ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇವರಲ್ಲಿ ಸುಮಾರು ಮೂವತ್ತು ಜನರು ಭಾಷಾಶಾಸ್ತ್ರದಲ್ಲಿ ಅಧ್ಯಯನಕ್ಕೆ ತೊಡಗಿಸಿಕೊಂದಿರುವ ಯುವ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ಭಾರತ ಮತ್ತು ಬೇರೆ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವವರಾಗಿದ್ದಾರೆ. ವಿದೇಶಗಳಿಂದ ಬರಲಿರುವ ಇಪ್ಪತ್ತು ವಿದ್ವಾಂಸರು ತಮ್ಮ ಶೋಧ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇವರಲ್ಲಿ ಉತ್ತರ ಅಮೆರಿಕಾ.ಫ್ರಾನ್ಸ್‌,ಬ್ರಿಟನ್‌,ಇರಾನ್‌.ಜರ್ಮನಿ.ಬಾಂಗ್ಲಾದೇಶ್‌ ಮತ್ತು ಪಾಕಿಸ್ತಾನದ ಭಾಷಾಶಾಸ್ತ್ರಜ್ಞರು ಸೇರಿದ್ದಾರೆ.
  • ಸಮ್ಮೇಳನವನ್ನು ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್‌ ಪ್ರಾಧ್ಯಾಪಕರಾದ ಪ್ರೊ.ಹರೀಶ್‌ ತ್ರಿವೇದಿಯವರು ನೆರವೇರಿಸಲಿದ್ದಾರೆ. ಅಮೆರಿಕನ್‌ ಇನ್ಸ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಸ್ಟಡಿಸ್‌ನ ಡೈರೆಕ್ತರ್‌ ಜನರಲ್‌ ಆದ ಡಾ.ಪೂರ್ಣಿಮಾ ಮೆಹತಾ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.
  • ಭಾರತದ ಖ್ಯಾತ ನಾಟಕಕಾರರಾದ ಗಿರೀಶ್‌ ಕಾರ್ನಾಡ್‌ ಅವರು 21ರಂದು ಸಮಾರೋಪ ಭಾಷಣ ಮಾಡುತ್ತಾರೆ.
  • ಸಮ್ಮೇಳನದಲ್ಲಿ ಐದು ಪ್ರಮುಖ ಉಪನ್ಯಾಸಗಳು ನಡೆಯಲಿವೆ. ಪ್ರೊ.ರಾಜೇಶ್ವರಿ ವಿ. ಪಂಢರಿಪಾಂಡೆ,ಯೂನಿವರ್ಸಿಟಿ ಅಫ್‌ ಇಲಿನಾಯ್‌ು ಅತ್‌ ಅರ್ಬಾನ ಚಾಂಪೇನ್‌ (ಭಾಷೆ ಮತ್ತು ಧರ್ಮ),ಪ್ರೊ. ಭ.ಕೃಷ್ಣಮೂರ್ತಿ,ಖ್ಯಾತ ಭಾಷಾಶಾಸ್ತ್ರಜ್ಞ,(ಆರ್ಯರು ಮತ್ತು ದ್ರಾವಿಡರು) ಪ್ರೊ.ಯಮುನ ಕಛ್ರು,ಯೂನಿವರ್ಸಿಟಿ ಆಫ್‌ ಇಲಿನಾಯ್‌ು ಅಟ್‌ ಅರ್ಬಾನ-ಷಾಂಪೇನ್‌ (ಭಾಷೆ,ಸಮಾಜ ಮತ್ತು ಕುಲಪ್ರಜ್ಞೆ) ಪ್ರೊ.ಉದಯನಾರಾಯಣ್‌ ಸಿಂಗ್‌ (ಭಾರತೀಯ ಭಾಷೆಗಳ ಹೊಸ ಸಮೀಕ್ಷೆ) ಮತ್ತು ಪ್ರೊ.ಮೀನಾಕ್ಷಿ ಮುಖರ್ಜಿ,ಇಂಗ್ಲಿಷ್‌ ಪ್ರಾಧ್ಯಾಪಕಿ (ಅಸಮಾನತೆಯ ಜಗತ್ತಿನಲ್ಲಿ ಇಂಗ್ಲಿಷ್‌) ಇವರು ಈ ಉಪನ್ಯಾಸಗಳನ್ನು ನೀಡುತ್ತಾರೆ.
  • ಮೂರು ವಿಚಾರ ಗೊಷ್ಟಿಗಳಿರುತ್ತವೆ. ‘ಭಾಷೆ ಮತ್ತು ಮಾಧ್ಯಮಗಳು’ ಎಂಬ ವಿಷಯವನ್ನು ಕುರಿತ ಗೋಷ್ಠಿಯನ್ನು ದಿ ಪ್ರಿಂಟರ್ಸ್‌(ಮೈಸೂರು)ಪ್ರೈ.ಲಿ ಇವರು ಪ್ರಾಯೋಜಿಸಿದ್ದಾರೆ. ಈ ಗೋಷ್ಠಿಯಲ್ಲಿ ದಟ್ಸ್‌ಕನ್ನಡ ಸಂಪಾದಕ ಎಸ್‌.ಕೆ. ಶಾಮ ಸುಂದರ ಸೇರಿದಂತೆ ಐದು ಜನ ವಿದ್ವಾಂಸರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಪಾರಂಪರಿಕ ಮಾಧ್ಯಮಗಳಲ್ಲಿ ಹೊಸ ಮಾಧ್ಯಮಗಳಲ್ಲಿ ಭಾಷೆಯ ಬಳಕೆಯ ಸಮಸ್ಯೆಯನ್ನು ಇಲ್ಲಿ ಚರ್ಚಿಸಲಾಗುತ್ತದೆ.
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜನೆಯಲ್ಲಿ ‘ಭಾರತೀಯ ಭಾಷೆಗಳ ಮೇಲೆ ಜಾಗತೀಕರಣದ ಪ್ರಭಾವ (ಕನ್ನಡವನ್ನು ಅನುಲಕ್ಷಿಸಿ)’ ಎಂಬ ವಿಚಾರವನ್ನು ಕುರಿತ ವಿಚಾರಗೋಷ್ಟಿ ನಡೆಯಲಿದೆ. ಇದರಲ್ಲಿ ಆರು ಜನ ತಜ್ಞರು ಭಾಗವಹಿಸಲಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ ನವರು ಈ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಏಕೀಕರಣದ ಸುವರ್ಣ ವರ್ಷದಲ್ಲಿ ಈ ವಿಷಯವನ್ನು ಕುರಿತ ಚರ್ಚೆಯನ್ನು ನಡೆಸುತ್ತಿರುವುದು ಸೂಕ್ತವಾಗಿದೆ.
  • ಇಂಗ್ಲಿಷ್‌ ಭಾಷೆಯಲ್ಲಿ ಬರೆದು ಜಗದ್ವಿಖ್ಯಾತರಾದ ರಾಜಾರಾವ್‌ (1928-2006) ಕುರಿತು ಒಂದು ವಿಚಾರ ಗೋಷ್ಠಿ ನಡೆಯಲಿದೆ. ಇದನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಯೋಜಿಸಲಿದೆ. ಕನ್ನಡದಲ್ಲಿ ಬರೆಯಲು ಆರಂಭಿಸಿದ ಕನ್ನಡಿಗ ರಾಜಾರಾವ್‌ ತಮ್ಮ ಜೀವಿತದ ಬಹುಭಾಗವನ್ನು ಹೊರದೇಶಗಳಲ್ಲಿ ಕಳೆದರಾದರೂ ಅವರ ಸಾಂಸ್ಕೃತಿಕ ಬೇರುಗಳು ಭಾರತದಲ್ಲಿಯೇ ಇದ್ದವು. ಅವರನ್ನು ಕುರಿತ ಈ ಚರ್ಚೆ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ.
  • ಇದಲ್ಲದೆ ಮೂವತ್ತೇಳು ವಿವಿಧ ಗೋಷ್ಟಿಗಳಲ್ಲಿ ವಿದ್ವಾಂಸರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಏಕಕಾಲಕ್ಕೆ ನಾಲ್ಕು ಸಮಾನಾಂತರ ಗೋಷ್ಟಿಗಳು ನಡೆಯುವಂತೆ ಆಯೋಜಿಸಲಾಗಿದೆ.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X