ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಜೈ : ನಂದಿನಿ ಹಾಲಿಗೆ 1ರೂಪಾಯಿ ಜಾಸ್ತಿ ಕೊಡಿ!

By Staff
|
Google Oneindia Kannada News

ಬೆಂಗಳೂರು : ಎಲ್ಲದರ ಬೆಲೆಗಳು ಗಗನಕ್ಕೇರುತ್ತಿವೆ. ಇನ್ನು ನಾವ್ಯಾಕೆ ಸುಮ್ಮನಿರಬೇಕು ಎಂಬಂತೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ(ಕೆಎಂಎಫ್‌), ನಂದಿನಿ ಹಾಲಿನ ದರವನ್ನು 1ರೂಪಾಯಿ ಹೆಚ್ಚಳ ಮಾಡಿದೆ. ಹೊಸ ದರಗಳು ಡಿ.15ರಿಂದ ಅನ್ವಯಿಸಲಿವೆ.

ಈ ಬಗ್ಗೆ ಕೆಎಂಎಫ್‌ ಅಧ್ಯಕ್ಷ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿವರಣೆ ನೀಡಿದ್ದು, ನಂದಿನಿ ಹಾಲಿನ ದರ 13ರಿಂದ 14ರೂ. ಆಗಲಿದೆ. ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಲಾಗಿದ್ದು, ಹೆಚ್ಚುವರಿ ಒಂದು ರೂಪಾಯಿಯನ್ನು ಹಾಲು ಉತ್ಪಾದಕರಿಗೆ ನೀಡುತ್ತೇವೆ ಎಂದರು.

ಲೀಟರ್‌ ಹಾಲಿಗೆ ಆಂಧ್ರದಲ್ಲಿ 16, ಕೇರಳದಲ್ಲಿ 15, ಮಹಾರಾಷ್ಟ್ರದಲ್ಲಿ 16, ತಮಿಳುನಾಡಿನಲ್ಲಿ 14 ರೂಪಾಯಿ ಇದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಕಡಿಮೆ. ಅಲ್ಲದೇ ಕಳೆದ ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳ ಮಾಡಿರಲಿಲ್ಲ ಎಂದು ರೇವಣ್ಣ ವಿವರಿಸಿದರು.

ಕರ್ನಾಟಕದಲ್ಲಿ ಪ್ರತಿನಿತ್ಯ 32 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಕೆಎಂಎಫ್‌ ವಾರ್ಷಿಕ 1700 ಕೋಟಿ ರೂ. ವಹಿವಾಟನ್ನು ನಡೆಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X