ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರೂಜಿ.ಕಾಂ ಜೊತೆ ‘ಒನ್‌ ಇಂಡಿಯಾ’ ಸುಖಪ್ರಯಾಣ

By Staff
|
Google Oneindia Kannada News

ಒನ್‌ ಇಂಡಿಯಾ ಬಳಗದ ಪೋರ್ಟಲ್‌ಗಳು ಈಗ ಮೈಕೈತುಂಬಿಕೊಂಡಿವೆ! ಗುರೂಜಿ.ಕಾಂನ ಸರ್ಚ್‌ ಇಂಜಿನ್‌ನಿಂದ ಓದುವ ಖುಷಿ ಇನ್ನಷ್ಟು ರುಚಿ! ಹುಡುಕುವ ಆಟಕ್ಕೆ ಸ್ವಾಗತ.

Guruji.com powers search on OneIndia.inಭಾರತದ ಮೊಟ್ಟ ಮೊದಲ ದೇಶೀಯ ಇಂಟರ್‌ನೆಟ್‌ ಸರ್ಚ್‌ ಇಂಜಿನ್‌ ಅನ್ನು ಒನ್‌ಇಂಡಿಯಾ.ಇನ್‌ ಅಳವಡಿಸಿಕೊಂಡಿದೆ. ಭಾರತದ ಮುಂಚೂಣಿ ಪೋರ್ಟಲ್‌ಗಳಲ್ಲಿ ಒಂದಾದ ಒನ್‌ಇಂಡಿಯಾ ಈಗ, ಗುರೂಜಿ.ಕಾಂ ಜೊತೆ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಂಡಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಒನ್‌ಇಂಡಿಯಾ ಬಳಕೆದಾರರಿಗೆ ನಮ್ಮ ಸರ್ಚ್‌ ಇಂಜಿನ್‌ನಿಂದ ಅನುಕೂಲವಾಗಲಿದೆ. ಪ್ರತಿತಿಂಗಳು 70ಮಿಲಿಯನ್‌ ಪೇಜ್‌ ವ್ಯೂಸ್‌ ಪಡೆಯುತ್ತಿರುವ ಒನ್‌ಇಂಡಿಯಾ ಜೊತೆ ಪಾಲುದಾರರಾಗಿರುವುದು ಸಂತೋಷದ ಸಂಗತಿ. ಒನ್‌ಇಂಡಿಯಾದ ಮಿಲಿಯನ್‌ಗಟ್ಟಲೇ ಗ್ರಾಹಕರಿಗೆ ಒಳ್ಳೆ ಸರ್ಜ್‌ ಇಂಜಿನ್‌ ಸಿಕ್ಕಿದಂತಾಗಿದೆ ಎಂದು ಗುರೂಜಿ.ಕಾಮ್‌ (Guruji.com, backed by Sequoia Capital India) ತಿಳಿಸಿದೆ.

ಭಾರತೀಯ ಪೋರ್ಟಲ್‌ ಮತ್ತು ಪ್ರಕಾಶಕರಿಗೆ ಪರ್ಯಾಯ ಆಯ್ಕೆಗಳನ್ನು ನೀಡಲು, ಅವರಿಗೆ ಪೂರಕ ನೆರವು ನೀಡುವ ಉದ್ದೇಶದಿಂದ ಸರ್ಚ್‌ ಇಂಜಿನ್‌ಗೆ ಚಾಲನೆ ನೀಡಲಾಯಿತು. ನಮ್ಮ ಈ ಸರ್ಜ್‌ ಇಂಜಿನ್‌ ವ್ಯಾಪ್ತಿ ಹೆಚ್ಚುತ್ತಿದೆ. ‘ಥಿಂಕ್‌ ಇಂಡಿಯಾ ಥಿಂಕ್‌ ಗುರೂಜಿ’ ಎಂಬ ನಮ್ಮ ಘೋಷ ವಾಕ್ಯವನ್ನು ಸತ್ಯ ಮಾಡುವ ಪ್ರಯತ್ನ ನಡೆದಿದೆ ಎಂದು ಗುರೂಜಿ.ಕಾಂನ ಸಿಇಓ ಮತ್ತು ಸಂಸ್ಥಾಪಕ ಅನುರಾಗ್‌ ದೋಡ್‌ ತಿಳಿಸಿದ್ದಾರೆ.

ಒನ್‌ಇಂಡಿಯಾದ ಸಿಇಓ ಬಿ.ಜಿ.ಮಹೇಶ್‌ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಉತ್ತಮ ತಾಂತ್ರಿಕತೆ ಮತ್ತು ಅಗತ್ಯತೆಗೆ ತಕ್ಕಂತೆ ಸ್ಪಂದಿಸುವ ಮೂಲಕ ಉತ್ತಮ ಸರ್ಚ್‌ ಇಂಜಿನ್‌ ಎಂಬ ಖ್ಯಾತಿ ಗುರೂಜಿ.ಕಾಂಗೆ ಸಂದಿದೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಗುರೂಜಿ.ಕಾಂ ಬಳಕೆ ಹೆಚ್ಚುತ್ತಿದೆ. ನಮಗೆ ಗುರೂಜಿಯಂಥ ಡೈನಮಿಕ್‌ ಕಂಪೆನಿ ಜೊತೆ ಗುರ್ತಿಸಿಕೊಳ್ಳಲು ಹೆಮ್ಮೆಯೆನ್ನಿಸುತ್ತಿದೆ ಎಂದಿದ್ದಾರೆ.

ಗುರೂಜಿ.ಕಾಂ : ಇದು ಭಾರತದ ಮೊಟ್ಟಮೊದಲ ಅಂತರ್ಜಾಲದ ಸರ್ಚ್‌ ಇಂಜಿನ್‌. ನವದೆಹಲಿಯ ಇಬ್ಬರು ಐಜಿಟಿ ಪದವೀಧರರ ಶೋಧ ಇದಾಗಿದೆ. ಕ್ರೋಲ್‌ ಟೆಕ್ನಾಲಜಿಯನ್ನು ಇದು ಬಳಸಿಕೊಂಡಿದೆ. ಸರಳ ಕೀ ವರ್ಡ್‌ಗಳನ್ನು ಬಳಸಿ, ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಭಾರತೀಯರಿಗೆ ವಿನೂತನ ಅನುಭವ ನೀಡುವಂತಿದೆ. ವೇಗವಾಗಿ ಮತ್ತು ಬಯಸಿದ್ದು ಪರದೆ ಮೇಲೆ ಮೂಡುತ್ತದೆ. ಈ ಸರ್ಚ್‌ ಇಂಜಿನ್‌ ಬಳಕೆಯಿಂದ ಸಮಯ ಉಳಿತಾಯ ಜೊತೆಗೆ ಮಾಹಿತಿ ಅಪಾರ... ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ - www.guruji.com

ಒನ್‌ಇಂಡಿಯಾ.ಇನ್‌ : ಭಾರತೀಯ ಬಳಕೆದಾರರು ಮತ್ತು ವಾಣಿಜ್ಯದಾರರಿಗೆ ಅಗತ್ಯ ಮಾಹಿತಿ ನೀಡುವುದು ಒನ್‌ ಇಂಡಿಯಾ ಇಂಟರ್ನೆಟ್‌ ಪೋರ್ಟಲ್‌ನ ಮುಖ್ಯಉದ್ದೇಶ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು, ಮನರಂಜನೆಯನ್ನು ಪ್ರಚಲಿತ ಸಂಗತಿಗಳನ್ನು ಪ್ರಸ್ತುತ ನೀಡಲಾಗುತ್ತಿದೆ.

ಒಂದೇ ದಿನದ ಅವಧಿಯಲ್ಲಿ ಸುಮಾರು ಸಾವಿರ ಸುದ್ದಿ-ವರದಿ-ಲೇಖನಗಳು ಪ್ರಕಟಗೊಳ್ಳುತ್ತಿವೆ. ಸಾಮಾನ್ಯ ಜ್ಞಾನ ಹೆಚ್ಚಿಸುವುದು ಮತ್ತು ವಿನೂತನ ಅನುಭವ ನೀಡುವಲ್ಲಿ ಈ ಪೋರ್ಟಲ್‌ ಪರಿಣಾಮಕಾರಿ. ತಾಜಾ ಸುದ್ದಿ, ಪ್ರಚಲಿತ ಘಟನೆಗಳು, ಮನರಂಜನೆ, ಕ್ರೀಡೆ, ಪ್ರವಾಸ, ಲಿವಿಂಗ್‌, ಕ್ಲಾಸಿಫೈಡ್‌ಗಳ ವೆಬ್‌ಸೈಟ್‌(ಕ್ಲಿಕ್‌.ಇನ್‌) -ಹೀಗೆ ಪ್ರತ್ಯೇಕ ವಿಭಾಗಗಳನ್ನು ಒನ್‌ ಇಂಡಿಯಾ ಹೊಂದಿದೆ.

ಇಷ್ಟು ಮಾತ್ರವಲ್ಲ, ಪ್ರಾದೇಶಿಕವಾಗಿ ಕನ್ನಡ, ತೆಲಗು, ತಮಿಳು, ಮಲಯಾಳಂ ಪೋರ್ಟಲ್‌ಗಳನ್ನು ನಡೆಸುತ್ತಿದೆ. ಪ್ರತಿ ಓದುಗರು ಮತ್ತು ಬಳಕೆದಾರರ ಅಗತ್ಯಗಳನ್ನು ಒನ್‌ಇಂಡಿಯಾ ಸಮರ್ಪಕವಾಗಿ ಪೂರೈಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X