ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪೊಲೀಸರ ಬಲೆಗೆ ಬ್ರೌನ್‌ ಶುಗರ್‌ ಸ್ಮಗ್ಲರ್‌

By Staff
|
Google Oneindia Kannada News

ಬೆಂಗಳೂರು : ಮಧ್ಯಪ್ರದೇಶ ಮೂಲದ ಮಾದಕ ವಸ್ತು ಮಾರಾಟಗಾರನೊಬ್ಬ ಸಿಕ್ಕಿಬಿದ್ದಿದ್ದು, ಆತನಿಂದ 41,300ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಮಧ್ಯಪ್ರದೇಶದ, ಮನ್ಸೂರ್‌ ಜಿಲ್ಲೆಯ ಬಾಲ್‌ಘೂಡ್‌ನ ದೀಪಕ್‌ ಪೋರ್‌ವಾಲ್‌(31), ನಗರದ ಉಪ್ಪಾರಪೇಟೆ ಪೊಲೀಸರ ಕೈಗೆ ಸಿಕ್ಕಿಬಿದ್ದವನು. ಈತ ನಗರಕ್ಕೆ ಬ್ರೌನ್‌ ಶುಗರ್‌ ಸರಬರಾಜು ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ದೇವೇಂದ್ರ ಸೋನಿ(36), ಫಿರೋಜ್‌(57) ಹಾಗೂ ಮೊಹಮ್ಮದ್‌ ಶರೀಫ್‌(50) ಎಂಬವರು, 500 ಗ್ರಾಂ ಬ್ರೌನ್‌ ಶುಗರ್‌ನೊಂದಿಗೆ ನವೆಂಬರ್‌ 27ರಂದು ಕೇಂದ್ರ ಕ್ರೆೃಂ ವಿಭಾಗದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆನಂತರ ದೀಪಕ್‌ ಪೋರ್‌ವಾಲ್‌ ಪತ್ತೆ ಕಾರ್ಯ ಆರಂಭವಾಗಿತ್ತು.

ಈ ಕುರಿತು ತನಿಖೆ ಮುಂದುವರಿದಿದ್ದು, ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X