ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಬಿಎಸ್‌, ಚೆನ್ನವೀರ ಕಣವಿಗೆ ಐಎಫ್‌ಎ ಸಂಸ್ಥೆ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಭಾರತೀಯ ಲಲಿತಾಕಲಾ ಸಂಸ್ಥೆ, ‘ನಮ್ಮೂರ್ನಾಗ್‌ ಸುವರ್ಣ ಸಂಭ್ರಮ’ ಕಾರ್ಯಕ್ರಮದಡಿ ಹಿರಿಯ ಗಾಯಕ ಪಿ.ಬಿ.ಶ್ರೀನಿವಾಸ್‌ ಹಾಗೂ ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.

ಸಂಸ್ಥೆ ಪಿ.ಬಿ.ಶ್ರೀನಿವಾಸ್‌ ಅವರಿಗೆ ‘ಗಾನ ಸಾರ್ವಭೌಮ’ ಹಾಗೂ ಚೆನ್ನವೀರ ಕಣವಿ ಅವರಿಗೆ ‘ಕರ್ನಾಟಕ ಕವಿರತ್ನ’ ಪ್ರಶಸ್ತಿ ಪ್ರಕಟಿಸಿದೆ. ಡಿಸೆಂಬರ್‌ 25ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ 5,000ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಶಿಕ್ಷಕರ ಸದನದಲ್ಲಿ ನಡೆಯಲಿದೆ. ಸಮಾರಂಭದ ನಂತರ ಪಿ.ಬಿ.ಶ್ರೀನಿವಾಸ್‌ ಗಾಯನ ಮನತಣಿಸಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X