• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮ ಹುಟ್ಟೂರಿನಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ

By Staff
|


ಮೈಸೂರು : ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ, ತಮ್ಮ ಹುಟ್ಟೂರಾದ ಸಿದ್ದರಾಮನ ಹುಂಡಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಮತಚಲಾಯಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆರಂಭಗೊಂಡ ಮೊದಲ ಮೂರು ಗಂಟೆ ಅವಧಿಯಲ್ಲಿಯೇ, 346 ಮತಗಟ್ಟೆಗಳಲ್ಲಿ ಶೇ.15ರಿಂದ 20ರಷ್ಟು ಮತದಾನವಾಗಿದೆ.

ಸೋಮವಾರ ಮಧ್ಯಾಹ್ನದವರೆಗೆ ಬಂದ ವರದಿಗಳ ಪ್ರಕಾರ, ಈವರೆಗೆ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತದಾನ ಶಾಂತಿಯುತವಾಗಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಮತದಾರರ ಹಾವಳಿ ತಡೆಯಲು ಗುರ್ತಿನ ಚೀಟಿ ತರುವಂತೆ ಮತದಾರರಿಗೆ ಚುನಾವಣಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಮೈಸೂರು ನಗರಸಭೆಯ 14ವಾರ್ಡ್‌ಗಳು ಮತ್ತು 250 ಹಳ್ಳಿಗಳು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ರಾಜ್ಯದಲ್ಲಿಯೇ ಇದು ಎರಡನೇ ದೊಡ್ಡ ವಿಧಾನಸಭಾ ಕ್ಷೇತ್ರ(ಮತದಾರರ ಸಂಖ್ಯೆ) ಎಂದು ಗುರ್ತಿಸಲ್ಪಟ್ಟಿದೆ.

(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more