ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.65ರಷ್ಟು ಮತದಾನ, ಡಿ.7ರಂದು ಭವಿಷ್ಯ ನಿರ್ಧಾರ!

By Staff
|
Google Oneindia Kannada News

65% voting done in Chamundeshwari assembly constituencyಮೈಸೂರು : ಸೋಮವಾರ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಶೇ.65-ರಿಂದ 70ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಳಗ್ಗೆ ನಿಧಾನಗತಿಯಲ್ಲಿ ಸಾಗಿದ ಮತದಾನ, ಸಂಜೆ ವೇಳೆಗೆ ಬಿರುಸಾಯಿತು. ಉದ್ದದ ಸಾಲುಗಳಲ್ಲಿ ನಿಂತು ಮತದಾರರು ಮತ ಚಲಾಯಿಸಿದರು. ಕ್ಷೇತ್ರದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಗುರ್ತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಮತಚಲಾವಣೆಗೆ ಆಯೋಗ ಕಡ್ಡಾಯ ಮಾಡಿತ್ತು. ಕಾಮಗೆರೆ ಹುಂಡಿಯಲ್ಲಿ ಕೆಲವು ಮತದಾರರ ಹೆಸರುಗಳು ಬಿಟ್ಟು ಹೋಗಿದ್ದವು. ಅದು ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ಚುನಾವಣಾ ವೀಕ್ಷಕರು ಕ್ಷೇತ್ರದೆಲ್ಲೆಡೆ ಭೇಟಿ ನೀಡಿ, ಪರಿಸ್ಥಿತಿ ವೀಕ್ಷಿಸಿದರು.

ಡಿ.7ರಂದು ಈ ಪ್ರತಿಷ್ಠಿತ ಚುನಾವಣೆಯ ಮತಎಣಿಕೆ ನಡೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X