• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಚಾಮುಂಡೇಶ್ವರಿ’ಯಲ್ಲಿ ಜಿದ್ದಾಜಿದ್ದಿ : ಒಂದು ನೋಟ

By Staff
|


ಮೈಸೂರು : ರಾಜ್ಯ ಮಾತ್ರವಲ್ಲದೇ ರಾಷ್ಟ್ರದ ಗಮನ ಸೆಳೆದ ಚಾಮುಂಡೇಶ್ವರಿ ಚುನಾವಣೆಯತ್ತ ಸದ್ಯಕ್ಕೆ ಎಲ್ಲರ ಕಣ್ಣು. ಸೋಮವಾರ ಸಂಜೆ 5ಕ್ಕೆ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ.

ನೋಟ ಒಂದು, ವಿಚಾರ ಹತ್ತು!!

  1. 346 ಮತಗಟ್ಟೆಗಳ ಪೈಕಿ 8 ಮತಗಟ್ಟೆಗಳು ಮಾತ್ರ ಸಾಮಾನ್ಯ ಮತಗಟ್ಟೆಗಳು. ಉಳಿದವುಗಳೆಲ್ಲ ಸೂಕ್ಷ್ಮ ಮತಗಟ್ಟೆಗಳೇ ಆಗಿವೆ.
  2. 1,89,282 ಪುರುಷರು ಮತ್ತು 1,79,317 ಮಹಿಳಾ ಮತದಾರರು ಸೇರಿದಂತೆ 3,68,599 ಮತದಾರರರನ್ನು ಕ್ಷೇತ್ರ ಹೊಂದಿದೆ.
  3. ಡಿ.4ರಂದು ಮತದಾನ. ಡಿ.7ರಂದು ಮತಎಣಿಕೆ ಮತ್ತು ಫಲಿತಾಂಶ ಪ್ರಕಟ.
  4. ಭದ್ರತೆ : ಕಾನೂನು ಸುವ್ಯವಸ್ಥೆ ಕಾಯಲು ಏಳು ಅರೆಸೇನಾ ಪಡೆಯ ತುಕಡಿಗಳನ್ನು, ಆರು ಸಾವಿರ ಪೊಲೀಸರನ್ನು, 32 ಕೆಎಸ್‌ಆರ್‌ಪಿ -ಡಿಎಆರ್‌ ತುಕಡಿಗಳನ್ನು, 52 ಸಂಚಾರಿ ಕಣ್ಗಾವಲು ಪಡೆಯನ್ನು ಬಳಸಿಕೊಳ್ಳಲಾಗಿದೆ.
  5. 1999ರ ಚುನಾವಣೆಯಲ್ಲಿ ಶೇ.65ರಷ್ಟು ಮತದಾನ(ಕಾಂಗ್ರೆಸ್‌-ಶೇ.34, ಜೆಡಿಎಸ್‌-ಶೇ.30.66, ಬಿಜೆಪಿ-ಶೇ.27.62ರಷ್ಟು ಮತಗಳು). 2004ರ ಚುನಾವಣೆಯಲ್ಲಿ ಶೇ.64.84ರಷ್ಟು ಮತದಾನ(ಜೆಡಿಎಸ್‌-ಶೇ.43.44, ಕಾಂಗ್ರೆಸ್‌-ಶೇ.27.95, ಬಿಜೆಪಿ-ಶೇ.18.98ರಷ್ಟು ಮತಗಳು)
  6. ನಕಲಿ ಮತಹಾಕಿದರೆ ದಂಡದ ಜೊತೆಗೆ ಜೈಲು ಶಿಕ್ಷೆ -ಚುನಾವಣಾ ಆಯೋಗ ಸ್ಪಷ್ಟನೆ.
  7. ಸಿದ್ದರಾಮಯ್ಯ ರಾಜೀನಾಮೆಯಿಂದ ಕ್ಷೇತ್ರದಲ್ಲಿ ಉಪಚುನಾವಣೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಶಿವಬಸಪ್ಪ ನಡುವೆ ಸ್ಪರ್ಧೆ. ಉಳಿದ 12ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.
  8. ಗುಟ್ಟು ಬಿಡದ ಮತದಾರ. ಹಣ, ಹೆಂಡದ ನದಿ ಹರಿಸಲು ರಾಜಕೀಯ ಪಕ್ಷಗಳ ಪೈಪೋಟಿ. ಚುನಾವಣೆ ನೀತಿನಿಯಮ ಉಲ್ಲಂಘಿಸಿದ ಕಾಂಗ್ರೆಸ್‌ ವಿರುದ್ಧ 54, ಜೆಡಿಎಸ್‌ ವಿರುದ್ಧ 42 ಪ್ರಕರಣಗಳು ದಾಖಲಾಗಿವೆ.
  9. ಚುನಾವಣಾ ವೀಕ್ಷಕ ರೇಮಂಡ್‌ ಪೀಟರ್‌ ಕಾರ್ಯ ವೈಖರಿಗೆ ದೇವೇಗೌಡ, ಕುಮಾರಸ್ವಾಮಿ ಟೀಕೆ. ಯಾರಿಗೂ ಸೊಪ್ಪು ಹಾಕದೇ, ಕರ್ತವ್ಯ ನಿರ್ವಹಣೆ.
  10. ಬಹಿರಂಗ ಪ್ರಚಾರ ಮುಗಿದ ನಂತರ, ರಾಜಕಾರಣಿಗಳನ್ನು ಕ್ಷೇತ್ರದಿಂದ ಬಲವಂತದಿಂದ ಚುನಾವಣಾ ಆಯೋಗ ಹೊರ ಕಳುಹಿಸಿತು. ಆದರೂ ಮುಖ್ಯಮಂತ್ರಿ ಸೇರಿದಂತೆ ಕೆಲವು ರಾಜಕಾರಣಿಗಳು, ರಂಗೋಲಿ ಕೆಳಗೆ ತೂರುವ ಯತ್ನ್ನ ಮಾಡಿದರು. ಈ ಮಧ್ಯೆ ಶಾಸಕ ಬಿ.ಸಿ.ಪಾಟೀಲ್‌ ಸೇರಿದಂತೆ ಕೆಲವರು ನೀತಿ ನಿಯಮ ಉಲ್ಲಂಘಿಸಿ ಪ್ರಚಾರ ಮಾಡಿದರು.
(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more