ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗಲ್‌ಪುರ ಮಾರ್ಗದಲ್ಲಿ ರೈಲು ಸಂಚಾರ ಪುನಾರಂಭ

By Staff
|
Google Oneindia Kannada News

ಭಾಗಲ್‌ಪುರ : ಹೌರಾ-ಜಮಾಲ್‌ಪುರ ರೈಲು ದುರಂತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಭಾನುವಾರದಿಂದ ಮತ್ತೆ ಪ್ರಾರಂಭವಾಗಿದೆ.

ದೆಹಲಿ-ಮಾಲ್ಡಾ ನಡುವೆ ಸಂಚರಿಸುವ ಫರಕ್ಕಾ ಎಕ್ಸ್‌ಪ್ರೆಸ್‌ ಬೆಳಗ್ಗೆ 8ಗಂಟೆ ಸುಮಾರು ಭಾಗಲ್‌ಪುರ ಮಾರ್ಗವಾಗಿ ಹೋಗುವುದರೊಂದಿಗೆ ರೈಲು ಸಂಚಾರ ಮತ್ತೆ ಯಥಾಸ್ಥಿತಿಗೆ ಬಂದಿತು.

ಇಲ್ಲಿನ ರೈಲು ನಿಲ್ದಾಣ ಬಳಿ ಇದ್ದ ಸುಮಾರು 150ವರ್ಷದ ಸೇತುವೆ, ಶನಿವಾರ(ಡಿಸೆಂಬರ್‌ 02)ಚಲಿಸುತ್ತಿದ್ದ ಹೌರಾ-ಜಮಾಲ್‌ಪುರ ಸೂಪರ್‌ಫಾಸ್ಟ್‌ ರೈಲಿನ ಮೇಲೆ ಕುಸಿದು ಬಿದ್ದ ಪರಿಣಾಮ 37ಜನ ಮೃತಪಟ್ಟಿದ್ದರು. ನೂರಾರು ಜನ ಗಾಯಗೊಂಡಿದ್ದರು.

ಗಾಯಾಳುಗಳನ್ನು ನಗರದ ಜವಾಹರಲಾಲ್‌ ನೆಹರೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮೃತ ದೇಹಗಳನ್ನು ಗುರುತಿಸಲು ಪೊಲೀಸ್‌ ಠಾಣೆಯಲ್ಲಿ ಇಡಲಾಗಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X