ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟಕಗಳ ಚೀಲ ಪತ್ತೆ : ಸಂಸತ್ತಿನಲ್ಲಿ ಆತಂಕ, ತಲ್ಲಣ!!!

By Staff
|
Google Oneindia Kannada News

ನವದೆಹಲಿ : ಪಾರ್ಲಿಮೆಂಟ್‌ ಭವನದ ಗಣ್ಯರ ದ್ವಾರದ ಬಳಿ ಸ್ಫೋಟಕಗಳುಳ್ಳ ಚೀಲವೊಂದು ಪತ್ತೆಯಾಗಿದ್ದು, ಗುರುವಾರ ಮಧ್ಯಾಹ್ನದಿಂದ ಈ ಭಾಗದಲ್ಲಿ ಆತಂಕದ ವಾತಾವರಣ ನೆಲೆಸಿದೆ.

ಸ್ಫೋಟಕಗಳುಳ್ಳ ಚೀಲವೊಂದು ಸಿಕ್ಕಿದ ಬೆನ್ನಲ್ಲಿ, ಪಾರ್ಲಿಮೆಂಟ್‌ ಭವನದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಪಾರ್ಲಿಮೆಂಟ್‌ ಭವನದ ಎಲ್ಲಾ ದ್ವಾರಗಳಲ್ಲೂ ಸಿಆರ್‌ಪಿಎಫ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚೀಲವನ್ನು ವಶಪಡಿಸಿಕೊಂಡಿರುವ ಬಾಂಬ್‌ ನಿಷ್ಕಿೃಯ ತಂಡದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಚಳಿಗಾಲದ ಅಧಿವೇಶನ ಸಂಸತ್ತಿನಲ್ಲಿ ನಡೆಯುತ್ತಿದೆ.

ಡಿ.13,2001ರಲ್ಲಿ ಪಾರ್ಲಿಮೆಂಟ್‌ ಭವನಕ್ಕೆ ನುಗ್ಗಿದ ಭಯೋತ್ಪಾದಕರು, ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತು.

ಅಣಕು ಪ್ರದರ್ಶನ : ಸ್ಫೋಟಕ ಚೀಲದ ಪ್ರಕರಣ ಕೆಲ ಹೊತ್ತು ಆತಂಕ ತಂದಿತ್ತು. ಆದರೆ ಅಂತಿಮವಾಗಿ ಇದೊಂದು ಅಣಕು ಪ್ರದರ್ಶನ ಎಂಬುದು ತಿಳಿದುಬಂದಿದೆ. ಸಂಸತ್‌ ಭವನದ ಸುರಕ್ಷತಾ ಕ್ರಮಗಳ ಪರಿಶೀಲಿಸಲು ಇಂತಹ ಅಣಕು ಕಾರ್ಯಕ್ರಮಗಳನ್ನು ಆಗಾಗ ನಡೆಸುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X