ವಸುಂಧರಾ ಮತ್ತು ಕಿರಣ್ರ ಅಧರ ಚುಂಬನ ತಪ್ಪೇ?!
ಜೈಪುರ : ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರ ತುಟಿ ಚುಂಬನ ವಿವಾದ ಸೃಷ್ಟಿಸಿದೆ.
ಭಾರತೀಯ ಸಂಸ್ಕೃತಿಯನ್ನು ಮೂರು ಕಾಸಿಗೆ ಹರಾಜು ಹಾಕುವಂತೆ ಇವರಿಬ್ಬರೂ ವರ್ತಿಸಿದ್ದಾರೆ. ಅದರಲ್ಲೂ ಮುಖ್ಯಮಂತ್ರಿಯಾಬ್ಬರ ಇಂಥ ವರ್ತನೆ ನಾಚಿಕೆಗೇಡು. ಕೂಡಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕೆಂದು ರಾಜಸ್ಥಾನ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವೇದಿಕೆಯ ಮೇಲೆಯೇ ಕಿರಣ್ ಮಜುಂದಾರ್ ಶಾ ಅವರ ತುಟಿಗೆ ತುಟಿ ಸೇರಿಸಿ, ವಸುಂಧರಾ ರಾಜೆ ಬಿಸಿ ಮುತ್ತು ನೀಡಿದ್ದರು. ಈ ದೃಶ್ಯದ ಛಾಯಾಚಿತ್ರ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಸಾರ್ವಜನಿಕರಿಂದ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಈ ಹಿಂದೆ ಪ್ಯಾಷನ್ ಶೋ ಒಂದರಲ್ಲಿ ಹೆಜ್ಜೆ ಹಾಕಿ ವಸುಂಧರಾ ರಾಜೆ ವಿವಾದ ಸೃಷ್ಟಿಸಿದ್ದರು. ಈಗ ಮುತ್ತಿನ ವಿವಾದ.
ಗೆಳೆಯರು, ಆತ್ಮೀಯರು ಅಥವಾ ಬಂಧುಗಳು ಪರಸ್ಪರ ಭೇಟಿಯಾದಾಗ ಕೈ ಕುಲುಕುತ್ತಾರೆ. ಮುಗಳ್ನಗುತ್ತಾರೆ. ಇವುಗಳಂತೆಯೇ ತುಟಿಚುಂಬನವೂ ಆತ್ಮೀಯತೆ ಬಿಂಬಿಸುವ ಒಂದು ಆಚಾರ. ಇದರಲ್ಲಿ ತಪ್ಪೇನಿದೆ ಎಂಬ ವಾದ ಸಹಾ ಕೆಲವರಿಂದ ಕೇಳಿ ಬಂದಿದೆ.ಈ ಬಗ್ಗೆ ನೀವೇನಂತೀರಾ?
(ಏಜನ್ಸೀಸ್)