ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ನಲ್ಲಿ ಜಗತ್ತು ಸುತ್ತಲು ಹೊರಟವರ ಬೆನ್ನುತಟ್ಟುವಿರಾ?

By Staff
|
Google Oneindia Kannada News

ಬೆಂಗಳೂರು : ‘ದೇಶ ಸುತ್ತು, ಕೋಶ ಓದು’ ಎಂಬುದು ಬಹಳ ಹಳೆಯ ಮಾತು. ಹೀಗೆ ಮಾಡುವುದರಿಂದ ವ್ಯಕ್ತಿಗೂ, ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂಬುದು ಬಲ್ಲವರ ನಂಬಿಕೆ. ಇದೇ ನಿಟ್ಟಿನಲ್ಲಿ ಇಬ್ಬರು ಸಾಹಸಿ ತರುಣರು ದೇಶ ಸುತ್ತಲು ಸಜ್ಜಾಗಿದ್ದಾರೆ.

ಈ ತರುಣರು ಡಿಸೆಂಬರ್‌ 3ರಂದು, ಮೋಟಾರ್‌ ಬೈಕಿನಲ್ಲಿ ವಿಶ್ವ ಪರ್ಯಟನೆ ಆರಂಭಿಸಲಿದ್ದಾರೆ. ಪರ್ಯಟನೆಯ ಮೊದಲ ಭಾಗವಾಗಿ ದಕ್ಷಿಣ ಏಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಭಾರತ ಸೇರಿದಂತೆ ಒಟ್ಟು ಏಳು ದೇಶ(ಪಾಕಿಸ್ತಾನ, ನೇಪಾಳ, ಭೂತಾನ, ಬಾಂಗ್ಲಾದೇಶ, ಮ್ಯಾನ್ಮಾರ್‌, ಥಾಯ್‌ಲ್ಯಾಂಡ್‌)ಗಳನ್ನು ಸುತ್ತಲಿದ್ದಾರೆ.

ಜಗತ್ತಿನ ನಾನಾ ಭಾಗಗಳ ಜನರ ಜೀವನ ಶೈಲಿ, ಧೈರ್ಯ-ಸಾಹಸ, ಸಂತಸಗಳನ್ನು ಪರಸ್ಪರ ತಿಳಿದುಕೊಳ್ಳುವುದು-ಹಂಚಿಕೊಳ್ಳುವುದು ಪ್ರವಾಸದ ಉದ್ದೇಶ. ಮೋಟಾರ್‌ ಬೈಕ್‌ನೊಂದಿಗೆ ಇವರುಗಳು, ನೋಟ್‌ ಪುಸ್ತಕ, ಪೆನ್ಸಿಲ್‌, ಕ್ಯಾಮರಾ ಸೇರಿದಂತೆ ವಿವಿಧ ನಿತ್ಯೋಪಯೋಗಿ ವಸ್ತುಗಳನ್ನು ಕೊಂಡೊಯ್ಯಲಿದ್ದಾರೆ. ಅದೂ ಕೇವಲ ಬೆನ್ನಿಗೆ ನೇತು ಹಾಕಿಕೊಳ್ಳುವ ಚೀಲದಲ್ಲಷ್ಟೇ...!

ಇಂತಹ ಸದಾಶಯದಿಂದ ಪ್ರವಾಸಕ್ಕೆ ತೆರಳುತ್ತಿರುವ ಇವರುಗಳಿಗೆ ಪ್ರಾಯೋಜಕರ ಅವಶ್ಯಕತೆ ಇದ್ದು, ಉದಾರಿಗಳು ನೆರವು ನೀಡಬೇಕೆಂದು ಕೋರಲಾಗಿದೆ. ಇ-ಮೇಲ್‌ ಮೂಲಕವೂ ಇವರುಗಳಿಗೆ ನಿಮ್ಮ ಪ್ರೋತ್ಸಾಹ ಸೂಚಿಸಬಹುದು.

ನೆರವು ನೀಡುವುದು ಹೇಗೆ...?

ಮೋಟಾರ್‌ ಬೈಕ್‌ ನಿರ್ವಹಣೆ ವೆಚ್ಚ, ವೈದ್ಯಕೀಯ, ಸಂವಹನ ಹಾಗೂ ಆಡಳಿತಾತ್ಮಕ ವೆಚ್ಚ ಭರಿಸುವುದು. ಕೆಲದಿನಗಳ ವಸತಿ ವೆಚ್ಚ, ಒಂದೆರಡು ದಿನಗಳ ಪೆಟ್ರೋಲ್‌ ಖರ್ಚು ಇತ್ಯಾದಿ ನೀಡುವುದು.

‘ಬಾರ್ಡರ್‌ಲೆಸ್‌ ಬೈಕರ್ಸ್‌ ’ ಹೆಸರಿನಲ್ಲಿ, ಮಲ್ಲೇಶ್ವರಂನ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಶಾಖೆಗೆ ಅಥವಾ ಕಿಶೋರ್‌ ಪಟವರ್ಧನ್‌ ಖಾತೆ ಸಂಖ್ಯೆ-1104(ಸಿಂಡಿಕೇಟ್‌ ಬ್ಯಾಂಕ್‌)ಕ್ಕೆ ಹಣ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : http://www.borderlessbikers.com/home.html

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X