ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಸಲದ ‘ಬೆಂಗಳೂರು ಹಬ್ಬ’ದಲ್ಲಿ 2800 ಕಲಾವಿದರು!

By Staff
|
Google Oneindia Kannada News

ಬೆಂಗಳೂರು : ನಗರದ 50ಕ್ಕೂ ಅಧಿಕ ಕಡೆ ಡಿ.3ರಿಂದ ನಡೆಯಲಿರುವ ಬೆಂಗಳೂರು ಹಬ್ಬದ ಕಾರ್ಯಕ್ರಮಗಳಲ್ಲಿ 2,800 ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡುತ್ತಿದ್ದ ಅವರು, ಡಿ.3ರಿಂದ 10ರವರೆಗೆ ಬೆಂಗಳೂರು ಹಬ್ಬ ನಡೆಯಲಿದೆ. ಈ ಹಬ್ಬದಲ್ಲಿ ಕರ್ನಾಟಕ ಸರ್ಕಾರವೂ ಪಾಲ್ಗೊಳ್ಳುತ್ತಿದೆ. ಈ ಸಲದ ಹಬ್ಬ ಬೃಹತ್‌ ಪ್ರಮಾಣದಲ್ಲಿ ನಡೆಯಲಿದ್ದು, ನಮ್ಮ ನೆಲದ ಪರಿಮಳವನ್ನು ಪಸರಿಸಲಿದೆ ಎಂದರು.

ಬೆಂಗಳೂರು ಹಬ್ಬದಲ್ಲಿ ಜಾನಪದ, ಸಿನಿಮಾ, ಸುಗಮಸಂಗೀತ, ಹಿಂದೂಸ್ತಾನಿ ಸಂಗೀತ, ಶಾಸ್ತ್ರೀಯ ಸಂಗೀತ ಮತ್ತಿತರ ಕಾರ್ಯಕ್ರಮಗಳು, ಬೆಂಗಳೂರಿಗರನ್ನು ರಂಜಿಸಲಿವೆ. ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೀವ್‌ ತಾರಾನಾಥ್‌, ಜಯತೀರ್ಥ ಮೇವುಂಡಿ, ಕಾಶೀನಾಥ್‌ ಪತ್ತಾರ್‌, ಸಂಗೀತ ಕಟ್ಟಿ ಮತ್ತಿತರರ ಸಂಗೀತ ಸುಧೆಯನ್ನು ಸವಿಯಬಹುದು ಎಂದು ವಿಠಲ ಮೂರ್ತಿ ಹೇಳಿದರು.

ಆರ್ಟಿಸ್ಟ್‌ ಫೌಂಡೇಷನ್‌ ಫಾರ್‌ ಆರ್ಟ್ಸ್‌ನ ಕಾರ್ಯನಿರ್ವಾಹಕ ಟ್ರಸ್ಟಿ ನಂದಿನಿ ಆಳ್ವ ಈ ಸಂದರ್ಭದಲ್ಲಿ ಹಾಜರಿದ್ದರು. ಏರ್‌ಟೆಲ್‌ ಈ ಸಲದ ಬೆಂಗಳೂರು ಹಬ್ಬದ ಪ್ರಧಾನ ಪ್ರಾಯೋಜಕತ್ವವನ್ನುವಹಿಸಿದೆ.

ಡಿ.3ರಿಂದ ಬೆಂಗಳೂರು ಹಬ್ಬ : ಮಸ್ತು ಮಜಾ ಮಾಡಿ!

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X