ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಬೇಸಿಗೆ ದಿನಗಳು ರಾಜ್ಯದಿ ಕಷ್ಟ... ಕಷ್ಟ... ಕಷ್ಟ...

By Staff
|
Google Oneindia Kannada News

ಬೆಂಗಳೂರು : ಈ ಸಲದ ಬೇಸಿಗೆ ಸಮೀಪಿಸುತ್ತಿದೆ. ಬೇಸಿಗೆ ಕಾವು ವಿದ್ಯುತ್‌ ನಿಗಮದ ದೆಸೆಯಿಂದ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ವಿದ್ಯುತ್‌ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರು ಹೊರತು ಪಡಿಸಿ, ರಾಜ್ಯದ ವಿವಿಧೆಡೆ ಲೋಡ್‌ ಶೆಡ್ಡಿಂಗ್‌ ಕಳೆದ 4-5 ದಿನಗಳಿಂದ ಜಾರಿಗೆ ಬಂದಿದೆ.

ಲೋಡ್‌ ಶೆಡ್ಡಿಂಗ್‌ ಬಗ್ಗೆ ಅಧಿಕೃತವಾಗಿ ಎಲ್ಲೂ ಪ್ರಕಟಿಸಿಲ್ಲ. ಆದರೂ ಸಂಜೆ ವೇಳೆ ಲೋಡ್‌ ಶೆಡ್ಡಿಂಗ್‌ ಮುಂದುವರೆದಿದೆ. ವಿದ್ಯುತ್‌ ಬಳಕೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇನ್ನೊಂದೆಡೆ ಕೆಲವು ಕಾರಣಗಳಿಂದ ವಿದ್ಯುತ್‌ ಉತ್ಪಾದನೆ ಪ್ರಮಾಣ ಕುಸಿದಿದೆ.

ರಾಜ್ಯದಲ್ಲಿ ಪ್ರಸ್ತುತ 450ರಿಂದ 500 ಮೆಗಾವಾಟ್‌ ವಿದ್ಯುತ್‌ ಕೊರತೆ ಕಂಡು ಬಂದಿದೆ. ಚಳಿಗಾಲದಲ್ಲಿಯೇ ವಿದ್ಯುತ್‌ ಅಭಾವ ಉಂಟಾಗಿದ್ದು, ಮುಂದಿನ ಬೇಸಿಗೆ ದಿನಗಳು ನಿಜಕ್ಕೂ ಕಷ್ಟ... ಕಷ್ಟ... ಕಷ್ಟ...

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X