• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಹೊರಟ್ಟಿ ಶಿಕ್ಷಕರ ದುರ್ಬಳಕೆ ಮಾಡಿಕೊಂಡರೇ?

By Staff
|


ಮೈಸೂರು : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಚುನಾವಣೆಗಾಗಿ ಶಿಕ್ಷಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಅವರಿಗೆ ದಿಗ್ಬಂಧನ ಹಾಕಿದ ಘಟನೆ ನಡೆದಿದೆ.

ದಿಗ್ಬಂಧನದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೊರಟ್ಟಿ, ನಾನು ಮತ್ತು ಶಿಕ್ಷಕ ಗೆಳೆಯರು ಹರಟೆಹೊಡೆಯುತ್ತಿದ್ದೆವು. ಆಗ ಕಾಂಗ್ರೆಸ್‌ನವರು ಬಂದು ಕೂಡಿಹಾಕಿ ಗಲಾಟೆ ಮಾಡಿದ್ದಾರೆ. ಶಾಸಕರಾದ ಉಗ್ರಪ್ಪ ಹಾಗೂ ಡಿ.ಮಾದೇಗೌಡ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ನಡೆದದ್ದೇನು...? : ನಗರದ ಒಂಟಿಕೊಪ್ಪಲು ಬಡಾವಣೆಯ ನಿರ್ಮಲಾ ಕಾನ್ವೆಂಟ್‌ನಲ್ಲಿ, ಮಂಗಳವಾರ(ನವೆಂಬರ್‌ 28) ಸಂಜೆ ಸುಮಾರು 5ಗಂಟೆಗೆ ಹೋದ ಸಚಿವರು ರಾತ್ರಿ ಬಹಳ ಹೊತ್ತಿನವರೆಗೂ ಅಲ್ಲೇ ಇದ್ದಾರೆ. ಅಲ್ಲದೆ ಸುಮಾರು 30ಮಂದಿ ಶಿಕ್ಷಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.

ಇದನ್ನರಿತ ಕಾಂಗ್ರೆಸ್‌ ಶಾಸಕರಾದ ಡಿ.ಮಾದೇಗೌಡ, ವಿ.ಎಸ್‌.ಉಗ್ರಪ್ಪ ಹಾಗೂ ಪ್ರಕಾಶ್‌ ರಾಠೋಡ್‌ ಹಲವು ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಸೇರಿ, ಸಚಿವ ಹೊರಟ್ಟಿ ಅವರಿಗೆ ದಿಗ್ಬಂಧನ ಹಾಕಿ, ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ಸಚಿವರು ಚುನಾವಣೆಯಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲು ಗುಪ್ತಸಭೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಘಟನೆ ಬಗ್ಗೆ ತಿಳಿದ ಜೆಡಿಎಸ್‌ ಕಾರ್ಯಕರ್ತರು ಶಾಸಕರಾದ ಸಿ.ಎಸ್‌.ಪುಟ್ಟರಾಜು, ಕೆ.ಟಿ.ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ಆಗಮಿಸಿ, ಬಸವರಾಜ ಹೊರಟ್ಟಿ ಅವರನ್ನು ಸಿನಿಮೀಯವಾಗಿ ಬಿಡಿಸಿಕೊಂಡು ಬಂದರು.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more