• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬಯಿ : ಡಿ.2ರಿಂದ ಅಖಿಲ ಭಾರತ ಕನ್ನಡ ಸಮ್ಮೇಳನ

By Staff
|


ಮುಂಬಯಿ : 10ನೇ ಅಖಿಲ ಭಾರತ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ಡಿಸೆಂಬರ್‌2ರಿಂದ 3ರವರೆಗೆ ಮುಂಬಯಿನಲ್ಲಿ ನಡೆಯಲಿದೆ.

ನಗರದ ಮಾತುಂಗಾ ಪ್ರದೇಶದಲ್ಲಿರುವ ಮೈಸೂರು ಅಸೋಸಿಯೇಷನ್‌ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಕರ್ನಾಟಕದ ಗೃಹಸಚಿವ ಎಂ.ಪಿ.ಪ್ರಕಾಶ್‌ ಉದ್ಘಾಟಿಸುವರು.

ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯ ಶಿವರಾಜ್‌ ವಿ.ಪಾಟೀಲ್‌ ವಹಿಸುವರು.

ನವದೆಹಲಿಯ ದೆಹಲಿ ಕನ್ನಡಿಗ ಪತ್ರಿಕೆ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿಚಾರಗೋಷ್ಠಿಗಳು ಜರುಗಲಿವೆ.

ನನ್ನ ಬದುಕಿನಲ್ಲಿ ಕನ್ನಡ, ಸುವರ್ಣ ಕರ್ನಾಟಕ : ಸಂಸ್ಕೃತಿ ಅವಲೋಕನ, ವೈವಿಧ್ಯ ಕನ್ನಡ, ಕರ್ನಾಟಕ ಸಂಸ್ಕೃತಿ ಪುನರುತ್ಥಾನ, ಎಂಬ ವಿಚಾರಗೋಷ್ಠಿಗಳು ನಡೆಯಲಿವೆ. ಕವಿಗೋಷ್ಠಿಯೂ ನಡೆಯಲಿದ್ದು, ಮಹಿಳಾ ಉತ್ಸವ, ಕರ್ನಾಟಕ ಸಾಂಸ್ಕೃತಿಕ ವೈಭವ ಮತ್ತು ಬಾಲಗೋಷ್ಠಿಗಳೂ ಗಮನಸೆಳೆಯಲಿವೆ.

ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಜಿ.ನಾರಾಯಣ ಅವರಿಗೆ ಕನ್ನಡ ವಿದ್ಯಾರಣ್ಯಪ್ರಶಸ್ತಿ ಹಾಗೂ ಕರ್ನಾಟಕ ವಿಧಾನ ಪರಿಷತ್‌ ಸದಸ್ಯ ಪ್ರಭಾಕರ ಕೋರೆ ಅವರಿಗೆ ಡಾ.ಕೆ.ವಿ.ಶಂಕರಗೌಡ ಸ್ಮಾರಕ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ ನೀಡಲಾಗುವುದು. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡಿಗರಿಗೆ ಸನ್ಮಾನಿಸಲಾಗುವುದು.

ದೆಹಲಿ ಕನ್ನಡಿಗ ಪತ್ರಿಕೆಯ ಬಳಗ ಸಮ್ಮೇಳನಕ್ಕೆ ಆದರದ ಸ್ವಾಗತ ಕೋರಿದೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more