ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಣಿಗಲ್ನಲ್ಲಿ ಭರ್ಜರಿ ಮಳೆ, ಚಾಮರಾಜನಗರ ಥರಥರ
ಬೆಂಗಳೂರು : ಕುಣಿಗಲ್ನಲ್ಲಿ 6 ಸೆಂ.ಮೀಟರ್, ಸಕಲೇಶಪುರ ಹಾಗೂ ನುಗ್ಗೇಹಳ್ಳಿಯಲ್ಲಿ ತಲಾ 1ಸೆಂ.ಮೀಟರ್ ಮಳೆ ದಾಖಲಾಗಿದೆ.
ಸೋಮವಾರದ ವಾತಾವರಣ ಮಾಪನ ಪ್ರಕಾರ, ರಾಜ್ಯದ ಕನಿಷ್ಠ ತಾಪಮಾನ 17.8ಡಿಗ್ರಿ ಸೆಲ್ಸಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಮುನ್ಸೂಚನೆ : ಗದಗ, ಕೊಪ್ಪಳ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೆಲವೆಡೆ ಮಧ್ಯಮ ಪ್ರಮಾಣದ ಮಳೆಯಾಗುವ ಸಂಭವವಿದೆ. ಕರಾವಳಿಯಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ.
ಬೆಂಗಳೂರಿನ ಕನಿಷ್ಠ ತಾಪಮಾನ ಸುಮಾರು 19ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
(ಯುಎನ್ಐ)