ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ : ಎರಡನೇ ಗಂಡನ ಕೊಂದ ಲೇಡಿ ಪೊಲೀಸ್‌!

By Staff
|
Google Oneindia Kannada News

ಬೆಳಗಾವಿ : ಹೆಂಡತಿಯನ್ನು ಕೊಂದು, ಶವವನ್ನು ಅಡಗಿಸಿಟ್ಟ ಘಟನೆಗಳು, ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇದೊಂದು ವ್ಯತಿರಿಕ್ತ ಪ್ರಕರಣ. ಮಹಿಳೆಯಾಬ್ಬಳು ತನ್ನ ಗಂಡನನ್ನು ಹತ್ಯೆ ಮಾಡಿದ ಪ್ರಕರಣ.

ಬೆಳಗಾವಿಯ ಮಾರ್ಕೆಟ್‌ ಪೊಲೀಸ್‌ ಠಾಣೆಯ ಮಹಿಳಾ ಪೇದೆ ಮಹಾದೇವಿ(35) ತನ್ನ ಸಹೋದ್ಯೋಗಿ, ಜೊತೆಗೆ ಎರಡನೇ ಗಂಡ ಲಕ್ಷ್ಮಣ ಭಜಂತ್ರಿ(27)ಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೊದಲ ಗಂಡನನ್ನು ತೊರೆದಿದ್ದ ಮಹಾದೇವಿ, ಇತ್ತೀಚೆಗಷ್ಟೆ ಎರಡನೇ ಮದುವೆಯಾಗಿದ್ದಳು.

ಹಣದ ವಿಚಾರದಲ್ಲಿ ಗಂಡ-ಹೆಂಡಿರ ನಡುವೆ ಘರ್ಷಣೆ ನಡೆದು, ಕೊಲೆಗೆ ಆಸ್ಪದವಾಗಿರಬಹುದು. ಎರಡು ದಿನಗಳ ಕಾಲ ಲಕ್ಷ್ಮಣನ ಶವವನ್ನು ಚಾಪೆಯಲ್ಲಿ ಸುತ್ತಿ ಮಂಚದಡಿ ಇಡಲಾಗಿತ್ತು . ಶವದ ವಾಸನೆಯಿಂದ ಸುತ್ತಮುತ್ತಲಿನ ಜನರು ಅನುಮಾನಗೊಂಡು, ಠಾಣೆಗೆ ಸುದ್ದಿ ಮುಟ್ಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X