ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಸ್ವಲ್ಪ ದಿನ ನಕಲಿ ಪುಸ್ತಕ ಮಾರಾಟಗಾರರಿಗೆ ಭಯ!

By Staff
|
Google Oneindia Kannada News

ಬೆಂಗಳೂರು : ನಕಲಿ ಪುಸ್ತಕಗಳ ಮಾರಾಟ ಜಾಲವನ್ನು ಬೇಧಿಸಿರುವ ಕೇಂದ್ರ ಅಪರಾಧ ದಳದ ಪೊಲೀಸರು, ಸುಮಾರು 32ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಇನ್ನು ಸ್ವಲ್ಪ ದಿನ ನಗರದ ನಕಲಿ ಪುಸ್ತಕ ಮಾರಾಟಗಾರರಿಗೆ ಆತಂಕ!

ಜೆ.ಸಿ.ನಗರದ ಮಹಾಲಕ್ಷ್ಮೀಪುರದಲ್ಲಿರುವ ಮುದ್ರಣಾಲಯವೊಂದರ ಮಾಲೀಕ ಗಣೇಶ್‌ ಮತ್ತು ಆತನ ಸಹಾಯಕ ಶ್ರೀಪಾಲ್‌ರನ್ನು ಬಂಧಿಸಲಾಗಿದ್ದು, ಅವರುಗಳಿಂದ -ದ ಇನ್ನೋಸೆಂಟ್‌ ಮ್ಯಾನ್‌, ದ ಮ್ಯಾಜಿಕ್‌ ಆಫ್‌ ಥಿಂಕಿಂಗ್‌ ಬಿಗ್‌, ಹ್ಯಾರಿ ಪಾಟರ್‌, ಎ ನ್ಯೂ ರಿಲೀಜಿಯನ್‌, ನೋಟ್ಸ್‌ ಟು ಮೈ ಸೆಲ್ಫ್‌ ಸೇರಿದಂತೆ 6,380ನಕಲಿ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಆರೋಪಿಗಳು ನಕಲಿ ಪುಸ್ತಕಗಳನ್ನು ಮುದ್ರಿಸಿ, ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಹೈದರಾಬಾದ್‌, ದೆಹಲಿ, ಪುಣೆ, ಕೋಲ್ಕತ್ತ, ಚೆನ್ನೈಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ನಕಲಿ ಪುಸ್ತಕಗಳ ಮಾರಾಟದಿಂದ, ಅಸಲಿ ಪ್ರಕಾಶಕರು ಕಂಗೆಟ್ಟಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X