ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು-ತುಮಕೂರು ಜೋಡಿ ರೈಲು ಮಾರ್ಗ 2007ರಲ್ಲಿ ರೆಡಿ
ಬೆಂಗಳೂರು : ತುಮಕೂರು-ಬೆಂಗಳೂರು ರೈಲ್ವೇ ಜೋಡಿ ಮಾರ್ಗದ ಕಾಮಗಾರಿ 2007ರ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದೆ ಎಂದು, ನೈಋತ್ಯ ರೈಲ್ವೇ ವಲಯದ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಮಹೇಶ್ ಮಂಗಲ್ ಹೇಳಿದ್ದಾರೆ.
ನಗರದಲ್ಲಿ ನಡೆದ ರಾಜ್ಯ ವಾಣಿಜ್ಯೋದ್ಯಮ ಮಂಡಳಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ವ್ಯಾಪಕವಾದ ರೈಲ್ವೇ ಜಾಲ ಇಲ್ಲವಾದ್ದರಿಂದ ಔದ್ಯೋಗಿಕ ಬೆಳವಣಿಗೆಗೆ ತೊಡಕುಂಟಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಲ್, ತುಮಕೂರು-ಬೆಂಗಳೂರು ಜೋಡಿ ಮಾರ್ಗ 2007ರ ಮಾರ್ಚ್ ಅಂತ್ಯಕ್ಕೆ ಹಾಗೂ ರಾಮನಗರ-ಬೆಂಗಳೂರು ಜೋಡಿ ಮಾರ್ಗ 2007ರ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ. ಕೋಲಾರ-ಚಿಕ್ಕಬಳ್ಳಾಪುರ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, November 22, 2006, 23:53 [IST]