ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಉದ್ಯಮಪತಿಗಳಿಗೆ ಇದು ಬಂಪರ್‌ ಲಾಟರಿ!

By Staff
|
Google Oneindia Kannada News

We are selling, how about you!ಬೆಂಗಳೂರು : ಇನ್‌ಫೊಸಿಸ್‌ ಟೆಕ್‌ನಾಲಜಿಸ್‌ ಸಂಸ್ಥೆಯ ಉದ್ಯಮಪತಿಗಳು ಸದ್ಯದಲ್ಲೆ ತಲಾ ಹಲವು ನೂರು ಕೋಟಿ ರೂಪಾಯಿಗಳ ಒಡೆಯರಾಗಲಿದ್ದಾರೆ ! ವಾವ್‌! ಅದು ಹೇಗೆ?

ಇತ್ತೀಚೆಗೆ ಆರಂಭಗೊಂಡ ಅಮೆರಿಕನ್‌ ಡಿಪಾಸಿಟರಿ ಷೇರ್ಸ್‌ (ADS) ಸಮೂಹಕ್ಕೆ ತಮ್ಮ ಷೇರುಗಳನ್ನು ನೀಡಲು ಇವರೆಲ್ಲ ತುದಿಗಾಲಲ್ಲಿ ನಿಂತಿದ್ದು , ಒಂದೊಮ್ಮೆ ಇನ್‌ಫಿ ಶೇರುಗಳನ್ನು ಎಡಿಎಸ್‌ ಒಪ್ಪಿಕೊಂಡರೆ ಇನ್ಫಿ ದೊರೆಗಳಿಗೆ ಅಷ್ಟೊಂದು ರೊಕ್ಕ ಬರುತ್ತದೆ.

ಹಾಗಾದಲ್ಲಿ ಇನ್‌ಫೊಸಿಸ್‌ನಲ್ಲಿನ ರಾಜಗುರು ನಾರಾಯಣಮೂರ್ತಿಗಳು ಇಟ್ಟುಕೊಂಡಿರುವ ಷೇರುಗಳ ಮೊತ್ತ ಶೇ.19ರಿಂದ ಶೇ.17ಕ್ಕೆ ಇಳಿಯಲಿದೆ. ನಾರಾಯಣಮೂರ್ತಿಯವರ ಹೊಂದಿರುವ ಷೇರುಗಳು ಪ್ರಮಾಣ ಶೇ.5.85ಆಗಿದ್ದು ಅದರಲ್ಲಿ 4 ಮಿಲಿಯನ್‌ ಷೇರುಗಳನ್ನು ಎಡಿಎಸ್‌ಗೆ ಕೊಡಲು ಮುಂದಾಗಿದ್ದಾರೆ. ಅಲ್ಲಿಗೆ ಇನ್‌ಫಿಯಲ್ಲಿ ತೊಡಗಿಸಿರುವ ನಾರಾಯಣಮೂರ್ತಿ ಕುಟುಂಬದ ಷೇರುಗಳು ಶೇ. 5.13ಕ್ಕೆ ಕುಸಿಯುತ್ತದೆ.

ಎಡಿಎಸ್‌ನ ಸದ್ಯದ ಬೆಲೆ 55 ಡಾಲರ್‌ ಅಂದುಕೊಂಡರೂ ಮೂರ್ತಿಯವರು ಮಾರಲು ಹೊರಟಿರುವ ಷೇರುಗಳು ಅವರಿಗೆ ಸಮಾರು 1000 ಕೊಟಿ ರೂಪಾಯಿ ತಂದುಕೊಡುತ್ತದೆ.

ಅಂತೆಯೇ, ಕಂಪನಿಯ ಸಿಇಓ ನಂದನ್‌ ನಿಲೇಖನಿ ಅವರ ಷೇರುಗಳ ಪ್ರಮಾಣ ಶೇ.4.05ರಿಂದ 3.55ಕ್ಕೆ ಇಳಿಯುತ್ತದೆ. ನಿಲೇಖನಿ ಕೊಡಲು ಮುಂದಾಗಿರುವ ಷೇರುಗಳ ಸಂಖ್ಯೆ 2.79 ಮಿಲಿಯನ್‌. ಈ ಮಾರಾಟದಿಂದ ಅವರಿಗೆ ಸಿಗುವ ದುಡ್ಡು 155 ಮಿಲಿಯನ್‌. ಜತೆಗೆ ಕಂಪನಿಯ ಸಿಓಓ ಎಸ್‌. ಗೋಪಾಲಕೃಷ್ಣ ಅವರ ಷೇರುಗಳೂ ಕೂಡ ಶೇ. 3.93ರಿಂದ ಶೇ.3.44ಕ್ಕೆ ಇಳಿಯುತ್ತದೆ.

ಇನ್‌ಫಿಯ ಈ ದೈತ್ಯ ಬಂಡವಾಳದಾರರಲ್ಲದೆ ಕೆ. ದಿನೇಶ್‌, ಎಸ್‌.ಡಿ. ಶಿಬುಲ್‌, ಶ್ರೀನಾಥ್‌ ಬಾಟ್ನಿ ಅವರುಗಳು ಕೂಡ ಎಸ್‌ಡಿಎಸ್‌ಗೆ ಷೇರು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಪಟ್ಟಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ಹೆಸರುಗಳು ರಾರಾಜಿಸುತ್ತಿವೆ. ಉದಾ : ಡಚ್‌ ಬ್ಯಾಂಕ್‌ ಸೆಕ್ಯುರಿಟೂಸ್‌, ಜೆಪಿ ಮೋರ್‌ಗನ್‌ ಮತ್ತು ಮೆರಿಲಿ ಲಿಂಚ್‌ ಕ್ಯಾಪಿಟನ್‌ ಮಾರ್ಕೆಟ್ಸ್‌.

(ದಟ್ಸ್‌ಕನ್ನಡ ಸುದ್ದಿಮನೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X