ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2007 : ಹೊಸ ವರ್ಷದಲ್ಲಿನ ಸಾರ್ವತ್ರಿಕ ರಜೆಗಳ ವಿವರ

By Staff
|
Google Oneindia Kannada News

Hurrey! Holidays announced. Plan your holidays!!ಬೆಂಗಳೂರು : 2007ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಮುಂದಿನ ವರ್ಷ ಎಂದೆಂದು ಸಾಲು ರಜೆಗಳು ಸಿಗುತ್ತವೆ.. ಆ ಸಂದರ್ಭದಲ್ಲಿ ಎಲ್ಲಿಗೆ ಹೋಗಬೇಕು... ಯಾವ ಹಬ್ಬ ಭಾನುವಾರ ಬಂದು, ಒಂದು ರಜೆ ತಪ್ಪಿಸಿತು ಅನ್ನೋದನ್ನು ಗಮನಿಸೋರು ಬಹಳ ಮಂದಿ. ಅದೇನೇ ಇರಲಿ, ರಜೆ ಪಟ್ಟಿಯತ್ತ ಒಂದು ಸಲ ಕಣ್ಣಾಡಿಸಿ.

ಅಂದ ಹಾಗೆ, ಎರಡನೇ ಶನಿವಾರಗಳಂದು ಬರುವ ಏಪ್ರಿಲ್‌ 14ರ ಅಂಬೇಡ್ಕರ್‌ ಜಯಂತಿ, ಅಕ್ಟೋಬರ್‌ 13ರ ರಂಜಾನ್‌, ನವೆಂಬರ್‌ 10ರ ಬಲಿಪಾಡ್ಯಮಿ ಮತ್ತು ಭಾನುವಾರಗಳಂದು ಬರುವ ಏಪ್ರಿಲ್‌ 1ರ ಈದ್‌ಮಿಲಾದ್‌, ಅಕ್ಟೋಬರ್‌ 21ರ ವಿಜಯದಶಮಿ ರಜಾ ದಿನಗಳನ್ನು ಈ ಪಟ್ಟಿ ಒಳಗೊಂಡಿಲ್ಲ.

  1. ಜನವರಿ 1 ಬಕ್ರಿದ್‌
  2. ಜನವರಿ 15 ಸಂಕ್ರಾಂತಿ
  3. ಜನವರಿ 26 ಗಣರಾಜ್ಯೋತ್ಸವ
  4. ಜನವರಿ 30 ಮೊಹರಂ
  5. ಫೆಬ್ರವರಿ 16 ಶಿವರಾತ್ರಿ
  6. ಮಾರ್ಚ್‌ 29 ಚಂದ್ರಮಾನ ಯುಗಾದಿ
  7. ಮಾರ್ಚ್‌ 31 ಮಹಾವೀರ ಜಯಂತಿ
  8. ಏಪ್ರಿಲ್‌ 6 ಗುಡ್‌ಫ್ರೆೃಡೆ
  9. ಏಪ್ರಿಲ್‌ 20 ಬಸವ ಜಯಂತಿ
  10. ಮೇ 1 ಕಾರ್ಮಿಕರ ದಿನಾಚರಣೆ
  11. ಆಗಸ್ಟ್‌ 15 ಸ್ವಾತಂತ್ರ ದಿನಾಚರಣೆ
  12. ಸೆಪ್ಟೆಂಬರ್‌ 15 ಗಣೇಶನ ಹಬ್ಬ
  13. ಅಕ್ಟೋಬರ್‌ 2 ಗಾಂಧಿ ಜಯಂತಿ
  14. ಅಕ್ಟೋಬರ್‌ 10 ಮಹಾಲಯ ಅಮವಾಸ್ಯೆ
  15. ಅಕ್ಟೋಬರ್‌ 20 ಮಹಾನವವಿ
  16. ನವೆಂಬರ್‌1 ಕನ್ನಡ ರಾಜ್ಯೋತ್ಸವ
  17. ನವೆಂಬರ್‌ 8 ನರಕ ಚತುರ್ದಶಿ
  18. ಡಿಸೆಂಬರ್‌ 21 ಬಕ್ರೀದ್‌
  19. ಡಿಸೆಂಬರ್‌ 25ರಂದು ಕ್ರಿಸ್‌ಮಸ್‌
ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಪರಿಮಿತ ರಜೆಗಳ ಪಟ್ಟಿ :

ಈ ಕಳೆಕಂಡ ಪಟ್ಟಿಯಲ್ಲಿ ಸಾರ್ವತ್ರಿಕ ರಜಾ ದಿನಗಳಂದು ಬರುವ ಜನವರಿ 1ರ ನೂತನ ವರ್ಷಾರಂಭ, ಏಪ್ರಿಲ್‌ 14ರ ಸೌರಮಾನ ಯುಗಾದಿ, ಅಕ್ಟೋಬರ್‌ 10ರ ಷಬ್‌-ಎ-ಖಾದರ್‌ ಹಾಗೂ ಏಪ್ರಿಲ್‌ 22ರ ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯರ ಜಯಂತಿ ಸೇರಿಸಿಲ್ಲ.

  1. ಜನವರಿ 27 ಮಾಧ್ವನವಮಿ
  2. ಮಾರ್ಚ್‌ 3 ಹೋಳಿ ಹಬ್ಬ
  3. ಮಾರ್ಚ್‌ 27 ಶ್ರೀರಾಮನವಮಿ
  4. ಏಪ್ರಿಲ್‌ 7 ಪವಿತ್ರ ಶನಿವಾರ
  5. ಮೇ 2ರ ಬುದ್ಧ ಪೂರ್ಣಿಮೆ
  6. ಆಗಸ್ಟ್‌ 24ರ ವರಮಹಾಲಕ್ಷ್ಮಿ ವ್ರತ
  7. ಆಗಸ್ಟ್‌ 27 ಋಗ್‌ ಉಪಕರ್ಮ, ತಿರುಓಣಂ
  8. ಆಗಸ್ಟ್‌ 28 ಯಜುರ್‌ ಉಪಕರ್ಮ
  9. ಆಗಸ್ಟ್‌ 29 ಷಬ್‌-ಎ-ಜರಾತ್‌
  10. ಸೆಪ್ಟಂಬರ್‌ 4ರ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ
  11. ಸೆಪ್ಟಬರ್‌ 14 ಸ್ವರ್ಣಗೌರಿ ವ್ರತ
  12. ಅಕ್ಟೋಬರ್‌ 12 ಜಮತ್‌-ಉಲ್‌-ವಿದಾ
  13. ಅಕ್ಟೋಬರ್‌ 18 ತುಲಾ ಸಂಕ್ರಮಣ
  14. ನವೆಂಬರ್‌ 24 ಗುರುನಾನಕ್‌ ಜಯಂತಿ
  15. ನವೆಂಬರ್‌ 26 ಹುತ್ತರಿ ಹಬ್ಬ
  16. ನವೆಂಬರ್‌ 27 ಭಕ್ತ ಕನಕದಾಸ ಜಯಂತಿ
  17. ಡಿಸೆಂಬರ್‌ 24 ಕ್ರಿಸ್‌ಮಸ್‌ ಈವ್‌
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X