ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚೀನಾ ಪ್ರಧಾನಿ ಭೇಟಿ ಖಂಡಿಸಿ ಬೆಂಗಳೂರಿನಲ್ಲಿ ಧರಣಿ
ಬೆಂಗಳೂರು : ಚೀನಾ ಅಧ್ಯಕ್ಷ ಹು ಜಿಂಟಾವೊ ಅವರ ಭಾರತ ಭೇಟಿಯನ್ನು ವಿರೋಧಿಸಿ, ಟಿಬೆಟಿಯನ್ ಯುವ ಕಾಂಗ್ರೆಸ್ ಮಂಗಳವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿತು.
ಕೋರಮಂಗಲದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಕೊನೆಯಾಯಿತು. ಅಲ್ಲಿ ಚೀನಾ ಪ್ರಧಾನಿ ವಿರುದ್ಧ ಘೋಷಣೆ ಕೂಗಿದ ನೂರಾರು ಯುವಕರು, ಟಿಬೆಟ್ಟಿಯನ್ನರಿಗೆ ಚೀನಾ ಸರ್ಕಾರ ನೀಡುತ್ತಿರುವ ಕಿರುಕುಳವನ್ನು ಖಂಡಿಸಿದರು.
ನಾಲ್ಕು ದಿನಗಳ ಅಧಿಕೃತ ಭೇಟಿ ಕಾರ್ಯಕ್ರಮದ ಹಿನ್ನೆಲೆ ಚೀನಾ ಅಧ್ಯಕ್ಷರು, ಭಾನುವಾರ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಮಾತುಕತೆ ನಡೆಸಲು ಅವರು ಭಾರತಕ್ಕೆ ಬಂದಿದ್ದಾರೆ.
(ಯುಎನ್ಐ)