ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಕಾಡು: ಸಹಸ್ರಮಾನದ ಪ್ರಥಮ ಪಂಚಲಿಂಗದರ್ಶನ

By Staff
|
Google Oneindia Kannada News

ತಲಕಾಡು : ಸಹಸ್ರಮಾನದ ಮೊದಲ ಪಂಚಲಿಂಗ ದರ್ಶನ ಸೋಮವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ವಿಶೇಷ ಪೂಜೆ ಪುನಸ್ಕಾರಗಳು ಸತತವಾಗಿ ನೇರವೇರುತ್ತಿವೆ.

ಪಂಚಲಿಂಗ ದರ್ಶನಕ್ಕಾಗಿ ಸಹಸ್ರಾರು ಜನರು, ನಾಡಿನ ವಿವಿಧ ಮೂಲೆಗಳಿಂದ ಇಲ್ಲಿಗೆ ಆಗಮಿಸಿದ್ದಾರೆ. ಇಲ್ಲಿನ ಆರಾಧ್ಯದೈವ ವೈದ್ಯನಾಥೇಶ್ವರನಿಗೆ ಸಾಂಪ್ರದಾಯಿಕ ಸೇವೆಗಳನ್ನು ಸಲ್ಲಿಸಲಾಗುತ್ತಿದೆ. ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಮತ್ತೊಂದು ಬೃಹತ್‌ ಧಾರ್ಮಿಕ ಕಾರ್ಯಕ್ರಮ ಇದಾಗಿದೆ.

ಪಂಚಲಿಂಗ ದರ್ಶನ : ಸುದ್ದಿ ತುಣುಕುಗಳು

  • ಪಂಚಲಿಂಗ ದರ್ಶನಕ್ಕಾಗಿ ಭಾನುವಾರ ರಾತ್ರಿಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆ ಐದು ಗಂಟೆಗೆ ದರ್ಶನ ಆರಂಭವಾಯಿತು.

  • ನವೆಂಬರ್‌ 25ರ ತನಕ ಪಂಚಲಿಂಗ ದರ್ಶನಕ್ಕೆ ಅವಕಾಶ. ಕಡೆಯ ದಿನವಾದ ಅಂದು 10ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ.

  • ಪಂಚಲಿಂಗ ದರ್ಶನದ ಹಿನ್ನೆಲೆಯಲ್ಲಿ ಪ್ರತಿ ದಿನ ಹತ್ತಾರು ವಿಶೇಷ. ರಥೋತ್ಸವಗಳೂ ಉಂಟು. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ.

  • ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಇನ್ನಿತರ ಸಚಿವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಂದ ವಿಶೇಷ ಪೂಜೆ ಸಲ್ಲಿಕೆ.

  • ಪಂಚಲಿಂಗ ದರ್ಶನಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 300 ಬಸ್‌ಗಳ ಸಂಚಾರ ವ್ಯವಸ್ಥೆ.

  • ತಲಕಾಡಿನಲ್ಲಿ 2500 ಪೊಲೀಸರಿಂದ ಬಿಗಿ ಬಂದೋಬಸ್ತು.

  • ವೈದ್ಯನಾಥೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರಕೇಶ್ವರ ಮತ್ತು ಮಲ್ಲಿಕಾರ್ಜುನೇಶ್ವರ ದೇವಸ್ಥಾನಗಳು ಮರಳಿನಲ್ಲಿ ಹೂತು ಹೋಗಿರುತ್ತವೆ. ಅವುಗಳನ್ನು ಹೊರ ತೆಗೆದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.

  • ಕಾವೇರಿ ದಡದಲ್ಲಿರುವ ತಲಕಾಡು, ಐತಿಹಾಸಿಕ ನಗರಿಯೂ ಹೌದು. ಕದಂಬ, ಚೋಳ, ಚಾಲುಕ್ಯ, ರಾಷ್ಟ್ರಕೂಟರ ಆಳ್ವಿಕೆಯನ್ನು ಈ ನೆಲ ಕಂಡಿದೆ.

  • ತಲಕಾಡು ಮೈಸೂರಿನಿಂದ 45ಕಿ.ಮೀ.ದೂರದಲ್ಲಿದೆ.

(ಯುಎನ್‌ಐ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X