• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣಕದಲ್ಲಿ ಕನ್ನಡ : ಸಹಿ-ಸಂಗ್ರಹ ಚಳ-ವಳಿಗೆ ಕೈಕೈ ಸೇರಿಸಿ...

By Staff
|


ಬೆಂಗಳೂರು : ಕಂಪ್ಯೂಟರ್‌ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬರ್‌ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್‌) ಕನ್ನಡ ತಂತ್ರಾಶಗಳಾದ ‘ನುಡಿ’ ಹಾಗು‘ಬರಹ’ಗಳನ್ನು ಕಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಕನ್ನಡಸಾಹಿತ್ಯ.ಕಾಂ ಸರ್ಕಾರಕ್ಕೆ ಇದೇ ತಿಂಗಳು ಮನವಿಯಾಂದನ್ನು ಸಲ್ಲಿಸುತ್ತಿದೆ.

ಮನವಿಗೆ ಐ.ಟಿ ವಲಯದ ನೂರಾರು ತಂತ್ರಜ್ಞರು, ವಿಜ್ಞಾನಿಗಳು, ಲೇಖಕರು, ಕವಿ-ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ ಬೆಂಬಲದ ಮಹಾಪೂರ ಹರಿದು ಬರುತ್ತಿದೆ...

ದೂರದ ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರಗಳಿಂದಲೂ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿ ಸಹಿ ಕಳಿಸುತ್ತಿದ್ದಾರೆ. ಶಿವಮೊಗ್ಗ, ಮೈಸೂರು, ತುಮಕೂರು ಮುಂತಾದೆಡೆಗಳಲ್ಲೂ ಕನ್ನಡಸಾಹಿತ್ಯ.ಕಾಂ ಬಳಗದ ಸದಸ್ಯರು ಬೆಂಬಲದ ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಈಗಾಗಲೇ ಮನವಿಗೆ ಬೆಂಬಲ ಸೂಚಿಸಿ ಸಹಿ ಮಾಡಿರುವ ಗಣ್ಯರ ಪಟ್ಟಿ ಕೆಳಕಂಡಂತಿದೆ.

  • ಗಿರೀಶ್‌ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು

  • ಪಿ ಶೇಷಾದ್ರಿ - ಚಲನ ಚಿತ್ರ ನಿರ್ದೇಶಕರು

  • ಲಿಂಗದೇವರು - ಚಲನಚಿತ್ರ ನಿರ್ದೇಶಕರು (ಮೌನಿ)

  • ಪ್ರೇಮಾ ಕಾರಾಂತ್‌ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು

  • ರಂಗನಾಥ್‌ - ಸಂಪಾದಕರು, ಕನ್ನಡಪ್ರಭ

  • ಪ ಸ ಕುಮಾರ್‌, ಕಲಾವಿದರು, ಕನ್ನಡ ಪ್ರಭ,

  • ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,

  • ಆರ್‌ ಪೂರ್ಣಿಮಾ - ಸಂಪಾದಕರು , ಉದಯವಾಣಿ

  • ವಿಶ್ವೇಶ್ವರ ಭಟ್‌ - ಸಂಪಾದಕರು, ವಿಜಯ ಕರ್ನಾಟಕ

  • ಕೃಷ್ಣ ಪ್ರಸಾದ್‌ - ಸಂಪಾದಕರು, ವಿಜಯ ಟೈಮ್ಸ್‌

  • ರಾಮಕೃಷ್ಣ ಉಪಾಧ್ಯ - ಸಹಾಯಕ ಸಂಪಾದಕರು, ಡೆಕ್ಕನ್‌ ಹೆರಾಲ್ಡ್‌

  • ಗಂಗಾಧರ ಮೊದಲಿಯಾರ್‌, ಸುದ್ಧಿ ಸಂಪಾದಕರು, ಪ್ರಜಾವಾಣಿ

  • ಎಂ ಕೆ ಭಾಸ್ಕರ ರಾವ್‌, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,

  • ಸಿ ಜಿ ಮಂಜುಳಾ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,

  • ಜಿ ಪಿ ಬಸವರಾಜು, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,

  • ಸುಗಂಧಿ- ಸಹಾಯಕ ಸಂಪಾದಕರು, ದಿ ಹಿಂದೂ

  • ಬಾಗೇಶ್ರೀ- ಮುಖ್ಯ ವರದಿಗಾರರು, ದಿ ಹಿಂದೂ

  • ಶಿಲ್ಪಾ, ಹಿರಿಯ ಉಪ ಸಂಪಾದಕರು, ದಿ ಹಿಂದೂ,

  • ಭೂಮಿಕಾ, ಉಪ ಸಂಪಾದಕರು, ದಿ ಹಿಂದೂ,

  • ಎಸ್‌ ಅರ್‌ ರಾಮಕೃಷ್ಣ, ಸುದ್ಧಿ ಸಂಪಾದಕರು, ಸಂಡೇ ಮಿಡ್‌ ಡೇ,

  • ಎಸ್‌ ದಿವಾಕರ್‌, ಲೇಖಕರು-ಪತ್ರಕರ್ತರು

  • ಡಾ।। ವಿಜಯಾ, ಪತ್ರಕರ್ತರು,

  • ವಿ ವೆಂಕಟೇಶ್‌, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,

ಮನವಿಗೆ ನಿಮ್ಮದೂ ಬೆಂಬಲವಿದೆಯೆಂದರೆ http://www.baraha.com/anakru/manavi.pdf ನಲ್ಲಿರುವ ಪಿಡಿಎಫ್‌ ಪುಟಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿರಿ. ನಿಮ್ಮ ಸ್ನೇಹಿತರಾದಿಯಾಗಿ ಬೆಂಬಲ ಸೂಚಿಸುವವರೆಲ್ಲರ ಸಹಿ ಮಾಡಿಸಿ, ಮನವಿಪತ್ರದೊಡನಿರುವ ವಿಳಾಸಕ್ಕೆ ಕೊರಿಯರ್‌ ಮೂಲಕ ಕಳಿಸಿ...
(ಮಾಹಿತಿ : ಅರೆ-ಹಳ್ಳಿ ರವಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more