ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.3ರಿಂದ ಬೆಂಗಳೂರು ಹಬ್ಬ : ಮಸ್ತು ಮಜಾ ಮಾಡಿ!

By Staff
|
Google Oneindia Kannada News

ಬೆಂಗಳೂರು : ಪ್ರಸಕ್ತ ವರ್ಷದ ಬೆಂಗಳೂರು ಹಬ್ಬವನ್ನು ‘ಸುವರ್ಣ ಬೆಂಗಳೂರು ಹಬ್ಬ’ವೆಂದು ಆಚರಿಸಲಾಗುತ್ತಿದ್ದು, ಇದು ಡಿಸೆಂಬರ್‌ 3ರಿಂದ 10ರವರೆಗೆ ನಡೆಯಲಿದೆ ಎಂದು ಹಬ್ಬದ ಸಂಯೋಜಕಿಯರಾದ ನಂದಿನಿ ಆಳ್ವಾ ಹಾಗೂ ಪದ್ಮಿನಿ ರವಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕನ್ನಡದಲ್ಲಿ ‘ಬೆಂಗಳೂರು ಹಬ್ಬ’ ಎಂದು ಕರೆಯಲಾಗುತ್ತಿದ್ದರೂ ಇಂಗ್ಲಿಷ್‌ನಲ್ಲಿ ‘ಬ್ಯಾಂಗಲೋರ್‌ ಹಬ್ಬ’(Bangalore Habba) ಎನ್ನಲಾಗುತ್ತಿತ್ತು. ಈ ಬಾರಿಯ ವೈಶಿಷ್ಟ್ಯವೆಂದರೆ ಇಂಗ್ಲಿಷ್‌ನಲ್ಲೂ ಬೆಂಗಳೂರು(Bengalooru Habba) ಎಂದೇ ಎಲ್ಲೆಡೆ ಬಿಂಬಿಸಲಾಗುವುದು ಎಂದರು.

ಖ್ಯಾತ ಕಲಾವಿದರುಗಳು ಸಂಗೀತ, ನೃತ್ಯ, ನಾಟಕ ಮೊದಲಾದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಕರಕುಶಲ, ಖಾದಿ ಹಾಗೂ ಪುಸ್ತಕ ಮೇಳಗಳೂ ನಡೆಯಲಿವೆ. ಹಬ್ಬದ ಪ್ರಾಯೋಜಕತ್ವ ಏರ್‌ಟೆಲ್‌ ಸಂಸ್ಥೆ ವಹಿಸಿಕೊಂಡಿದ್ದು, ಸುಮಾರು 4ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X