ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಕರ್ನಾಟಕ : ‘ಹಲ್ಮಿಡಿ’ ಗ್ರಾಮಸ್ಥರ ಸಿಡಿಮಿಡಿ!

By Staff
|
Google Oneindia Kannada News

ಬೇಲೂರು : ಸುವರ್ಣ ಕರ್ನಾಟಕದ ಸಂದರ್ಭದಲ್ಲಿ, ಹಲ್ಮಿಡಿ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ನೋವು ತೋಡಿಕೊಂಡಿರುವ ಗ್ರಾಮಸ್ಥರು, ಸರ್ಕಾರದ ಧೋರಣೆ ಖಂಡಿಸಿ ‘ಹಲ್ಮಿಡಿ ಕನ್ನಡೋತ್ಸವ’ ಆಚರಿಸಲು ನಿರ್ಧರಿಸಿದ್ದಾರೆ.

ಕನ್ನಡ ಸಂಸ್ಕೃತಿ ಎಂದ ತಕ್ಷಣ ಹಲ್ಮಿಡಿ ನೆನಪಾಗಲೇಬೇಕು. ಪರಿಸ್ಥಿತಿ ಹೀಗಿರುವಾಗ ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಈ ಸ್ಥಳಕ್ಕೆ ವಿಶೇಷ ಮಹತ್ವ ನೀಡಿ, ಆಚರಣೆಯನ್ನು ಇಲ್ಲಿಂದಲೇ ಪ್ರಾರಂಭಿಸಬೇಕಿತ್ತು. ಆದರೆ ಸರ್ಕಾರ ಹಲ್ಮಿಡಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಗ್ರಾಮಸ್ಥರು ನೊಂದು ನುಡಿದಿದ್ದಾರೆ.

ಹಲ್ಮಿಡಿ ಬಗ್ಗೆ ಕೆಲವು ಮಾಹಿತಿ :

  • ಹಲ್ಮಿಡಿ ಯಾವ ಕನ್ನಡಿಗನಿಗೆ ಗೊತ್ತಿಲ್ಲ ಹೇಳಿ? ಕನ್ನಡದ ಮೊಟ್ಟಮೊದಲ ಶಾಸನ ದೊರೆತಿರುವುದೇ ಈ ಊರಿನಲ್ಲಿ . ಹಾಗಾಗಿ ಇದಕ್ಕೆ ಹಲ್ಮಿಡಿ ಶಾಸನ ಎಂದೇ ಕರೆಯಲಾಗುತ್ತದೆ.
  • ಕನ್ನಡ ಭಾಷೆ ಸುಮಾರು 2,500 ವರ್ಷಗಳಷ್ಟು ಪ್ರಾಚೀನವಾದುದು ಎಂದು ಪ್ರಾಜ್ಞರು ಒಪ್ಪಿದ್ದಾರೆ. ಕದಂಬ ವಂಶದ ರಾಜ ಕಾಕುಸ್ಥವರ್ಮಾ, ಕ್ರಿಸ್ತಪೂರ್ವ 450ರ ಸುಮಾರು ಹಲ್ಮಿಡಿ ಶಾಸನ ಕೆತ್ತಿಸಿದ ಎಂದು ನಂಬಲಾಗಿದೆ. ಆದರೆ, ಈ ಶಾಸನದ ಮೂಲಕವಂತೂ ಕನ್ನಡ ಕನಿಷ್ಠ 1,500 ವರ್ಷಗಳಷ್ಟು ಹಳೆಯದು ಎಂದು ಗೊತ್ತಾಗುತ್ತದೆ.
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X