ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ : ತೀವ್ರ ಶೋಧ
ಬೆಂಗಳೂರು : ಬೆದರಿಕೆ ಕರೆ ಹಿನ್ನೆಲೆ ಪೊಲೀಸರು ವಿಧಾನಸೌಧದಲ್ಲಿ ಶನಿವಾರ ತೀವ್ರ ಶೋಧನಾ ಕಾರ್ಯ ನಡೆಸಿದರು. ನಂತರ ಇದೊಂದು ಹುಸಿ ಕರೆ ಎಂಬುದು ಸ್ಪಷ್ಟವಾಯಿತು.
ಸುಮಾರು 3ಗಂಟೆಗಳ ಕಾಲ ಶ್ವಾನದಳದೊಂದಿಗೆ ಪೊಲೀಸರು ಶೋಧನೆ ಮಾಡಿದರು. ಆದರೆ ಯಾವುದೇ ಸ್ಫೋಟಕ ಕಂಡುಬರಲಿಲ್ಲ. ವಿಧಾನಸೌಧದ ಭದ್ರತಾ ಸಿಬ್ಬಂದಿಗೆ ಬಂದ ಹುಸಿ ಬೆದರಿಕೆ ಕರೆ ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿತ್ತು. ಹುಸಿ ಕರೆ ಮಾಡಿದ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ಶನಿವಾರದ ರಜೆಯಿಂದಾಗಿ ವಿಧಾನಸೌಧ ಇಂದು ಬಿಗೋ ಎನ್ನುತ್ತಿತ್ತು. ಕೆಲವು ಅಧಿಕಾರಿಗಳಷ್ಟೇ ಹಾಜರಿದ್ದರು. ನಗರದ ವಿವಿಧೆಡೆ ಇಂತಹ ಹುಸಿ ಕರೆಗಳ ಕಾಟ ಹೆಚ್ಚುತ್ತಿದೆ. ಇವುಗಳ ಬಗ್ಗೆ ಪೊಲೀಸರು ಗಮನಹರಿಸಿದ್ದಾರೆ.
(ಯುಎನ್‌ಐ)