• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಲ್‌-ಖೈದಾ ಬೆದರಿಕೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

By Staff
|


Airports in South India on high alertನವದೆಹಲಿ : ಅಲ್‌-ಖೈದಾ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಆರು ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ಅದರಲ್ಲೂ ಕೇರಳ ಮತ್ತು ತಮಿಳುನಾಡಿನ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಗುರುವಾರ ಹೆಚ್ಚಿದೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣಗಳು ಅಥವಾ ವಿಮಾನದಲ್ಲಿ ಸ್ಫೋಟಕಗಳನ್ನು ಸಿಡಿಸುವುದಾಗಿ ಬೆದರಿಸಿ, ತಮಿಳುನಾಡಿನ ತ್ರಿಚಿ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆಅನಾಮಿಕ ಪತ್ರವೊಂದು ಬಂದಿದೆ.

ಹತ್ತು ಜನ ಅಲ್‌-ಖೈದಾ ಉಗ್ರರು ಭದ್ರಾತಾ ವ್ಯವಸ್ಥೆ ಮುರಿದು, ಭಯೋತ್ಪಾದನಾ ಕೃತ್ಯ ನಡೆಸಲಿದ್ದಾರೆಂಬ ಅಂಶ ಪತ್ರದಲ್ಲಿದೆ. ಈ ನಿಟ್ಟಿನಲ್ಲಿ ಚೆನ್ನೈ, ಕೊಚ್ಚಿ, ತ್ರಿಚಿ, ತಿರುವನಂತಪುರಂ ಮತ್ತು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಬಿಗಿಬಂದೋಬಸ್ತು ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲೂ ಕೂಡ, ಉಗ್ರಗಾಮಿಗಳ ಬೆದರಿಕೆ ಸೂಚನೆಗಳು ಕಳೆದ ಒಂದು ವಾರದಿಂದ ಸುಳಿದಾಡುತ್ತಿದೆ. ಗೃಹಸಚಿವರು ಮತ್ತು ಉನ್ನತ ಪೊಲೀಸ್‌ ಅಧಿಕಾರಿಗಳು ಹಲವಾರು ಸಭೆಗಳನ್ನು ನಡೆಸಿ, ಬಿಗಿ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಬೆಂಗಳೂರಿಗೆ ಮಾನವ ಬಾಂಬ್‌ ಬರಲಿದೆ ಎಂಬ ಸುದ್ದಿ ಪೊಲೀಸ್‌ ವಲಯಗಳಲ್ಲಿ ಆತಂಕ ಹೆಚ್ಚಿಸಿದೆ.

ಕರ್ನಾಟಕದ ಪ್ರಮುಖ ತಾಣಗಳಾದ ಕೆಆರ್‌ಎಸ್‌, ಇನ್ಫೋಸಿಸ್‌, ವಿಪ್ರೋ, ವಿಧಾನಸೌಧ, ಶ್ರವಣಬೆಳಗೊಳ ಮುಂತಾದೆಡೆ ಪೊಲೀಸ್‌ ಹೆಚ್ಚು ನಿಗಾವಹಿಸಿದ್ದಾರೆ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more