ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜು ಸುತ್ತಮುತ್ತ ಬೀಡಿ-ಸಿಗರೇಟು-ಜರ್ದಾ ವರ್ಜ್ಯ

By Staff
|
Google Oneindia Kannada News

ಬೆಂಗಳೂರು :

  • ಇದು ಕಾನೂನು ವಿಧಿಸಿದ ಎಚ್ಚರಿಕೆ
  • ಸಿಗರೇಟು ಬೀಡಿ ಸೇದುವುದು ಆರೋಗ್ಯಕ್ಕೆ ಹಾನಿಕರ
  • 18 ವರ್ಷ ವಯಸ್ಸಿನ ಕೆಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದಿಲ್ಲ
Statutory Warning : you cant smoke in College compounds in India-ಇಂತಹ ಘೋಷಣೆಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. ಅದರಪಾಡಿಗೆ ಅದು, ನಮಗೆ ನಾಲಕ್ಕು ಪಾಕೀಟು ಜರ್ದಾ ಕೊಡಿ ಎನ್ನುತ್ತದೆ ನಮ್ಮ ಸಮಾಜ. ಈ ನಡುವೆ ಹೊಸ ಕಾನೂನು ಉಪಕ್ರಮಗಳು ಜಾರಿಗೆ ಬರುತ್ತಲೇ ಇರುತ್ತವೆ. ಅಂತಹ ಒಂದು ನಿಯಮ ಈಗ ಜಾರಿಗೆ ಬರಲಿದೆ.

ಇನ್ನು ಮುಂದೆ ಶಾಲೆ-ಕಾಲೇಜು ಆವರಣಗಳಲ್ಲಿ ಸಿಗರೇಟು, ತಂಬಾಕು ಉತ್ಪನ್ನಗಳಾದ ಪಾನ್‌ ಪರಾಗ್‌, ಜರ್ದಾ ಮುಂತಾದ ಪದಾರ್ಥಗಳನ್ನು ಮಾರಾಟ ಮಾಡದಂತೆ ನಿಷೇಧಿಸುವ ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಆದೇಶ ರಾಜ್ಯ ಸರ್ಕಾರಗಳಿಗೆ ರವಾನೆ ಆಗಿದೆ.

ಕಾಲೇಜು, ಡೀಮ್ಡ್‌ ವಿಶ್ವವಿದ್ಯಾಲಯಗಳ ನೂರು ಮೀಟರ್‌ ಆಸುಪಾಸಿನಲ್ಲಿ ಜರ್ದಾ, ಬೀಡಾ, ಸಿಗರೇಟ್‌ಗಳಂತಹ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಈ ಕಾನೂನನ್ನು ಜಾರಿಗೊಳಿಸಲು ಸೂಚಿಸಿ ಕೇಂದ್ರಾಡಳಿತ ಪ್ರದೇಶ, ರಾಜ್ಯ ಸರ್ಕಾರ, ವಿಶ್ವವಿದ್ಯಾಲಯದ ಕುಲಪತಿಗಳಿಗೆ ಯುಜಿಸಿ ಸುತ್ತೋಲೆ ಕಳುಹಿಸಿದೆ.

ಯುಜಿಸಿಯ ಈ ಕ್ರಮ ಉತ್ತಮವಾಗಿದೆ. ಶೀಘ್ರವಾಗಿ ಕಾನೂನು ಜಾರಿ ಬರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಿ. ಎಚ್‌. ಶಂಕರ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ತಂಬಾಕು ಉತ್ಪನ್ನಗಳ ಮಾರಾಟವನ್ನು ಕಾಲೇಜುಗಳ ಸುತ್ತಮುತ್ತ ನಿಷೇಧಿಸುವ ಕಾನೂನು 2004ರಲ್ಲೇ ಜಾರಿಗೆ ಬಂದಿತ್ತು. ಆದರೂ ನಮ್ಮ ಹುಡುಗರು ಮತ್ತು ಹುಡುಗಿಯರು ದಂ ಎಳೆಯುವುದಕ್ಕೆ ಸ್ವಲ್ಪಾನೂ ಹೆದರುತ್ತಿರಲಿಲ್ಲ. ನಿಮಗೆ ಈ ಕಾನೂನು ಏನನ್ನಿಸುತ್ತೆ ಅಂತ ವಿಜಯ ಕಾಲೇಜ್‌ ವಿದ್ಯಾರ್ಥಿ ಶೇಖರ ಪೂರ್ಣ ಎಂಬುವವನಿಗೆ ಕೇಳಲಾಯ್ತು. ಅದಕ್ಕೆ ಅವನು ‘ಇದು ಲೆಕ್ಚರರ್ಸ್‌ಗೂ ಅಪ್ಲೈ ಆಗತ್ತಾ ಸಾರ್‌ ’ ಅಂತ ನಮ್ಮನ್ನೇ ಪ್ರಶ್ನಿಸಿದ!

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X