ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೊಂದು ಮೊಟ್ಟೆ ತಿನ್ನೋರಿಗೊಂದು ಬ್ಯಾಡ್‌ ನ್ಯೂಸ್‌!

By Staff
|
Google Oneindia Kannada News

Egg to cost more from November 06ಬೆಂಗಳೂರು : ‘ದಿನಕ್ಕೊಂದು ಮೊಟ್ಟೆ ತುಂಬುವುದು ನಿಮ್ಮ ಹೊಟ್ಟೆ ’ ಎನ್ನುದೇನೋ ಸರಿ. ಆದರೆ ಸೋಮವಾರದಿಂದ ಮೊಟ್ಟೆ ತಿನ್ನುವ ಮಂದಿ ಸ್ವಲ್ಪ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದ್ರೆ ಏಕಾಏಕಿ ಮೊಟ್ಟೆಯಾಂದರ ದರ 50ಪೈಸೆ ಹೆಚ್ಚಳಗೊಂಡಿದೆ.

ಜೋಳ, ರಾಗಿ ಸೇರಿದಂತೆ ಕೋಳಿಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಿವೆ. ಹೀಗಾಗಿ ಮೊಟ್ಟೆ ದರ ಹೆಚ್ಚಿಸಬೇಕೆಂದು ಮೊಟ್ಟೆ ಮಾರಾಟಗಾರರು ಮನವಿ ಸಲ್ಲಿಸಿದ್ದರು. ಇನ್ನು ಮುಂದೆ ಮೊಟ್ಟೆ ದರ ರೂ.2.50ಆಗಲಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ(ಎನ್‌ಇಸಿಸಿ)ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಸ್‌.ತ್ರಿನಾಥ ರೆಡ್ಡಿ ಹೇಳಿದ್ದಾರೆ.

ಸೊಪ್ಪು, ತರಕಾರಿ ಬೆಲೆಗಳು ದಿನೇ ದಿನೇ ಹೆಚ್ಚುತ್ತಿವೆ. ಅದೇ ರೀತಿ ಹೆಚ್ಚು ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ಮೊಟ್ಟೆ ಬೆಲೆಯೂ ಹೆಚ್ಚಳವಾಗಿದೆ. ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕು. ಕುಕ್ಕುಟ ಉದ್ಯಮ ನಂಬಿದವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಕೋರಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X