ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡಿಎ-ಬಿಎಂಪಿ ಕಾರ್ಯಾಚರಣೆ : ಕೋಟ್ಯಂತರ ಆಸ್ತಿ ವಶ

By Staff
|
Google Oneindia Kannada News

ಬೆಂಗಳೂರು : ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಹಾಗೂ ಮಹಾನಗರಪಾಲಿಕೆ(ಬಿಎಂಪಿ) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 180ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.

ಗೆರೆಹಳ್ಳಿ, ಬನಶಂಕರಿ 3ನೇಹಂತ ಹಾಗೂ ಹೊಸಕೆರೆಹಳ್ಳಿ ಸುತ್ತಮುತ್ತ ಕಾರ್ಯಾಚರಣೆ ನಡೆದಿದೆ. ಸುಮಾರು 36 ಎಕರೆ ಪ್ರದೇಶ ಒತ್ತವರಿ ಮಾಡಿಕೊಂಡು, ಅಕ್ರಮವಾಗಿ ಕಾಂಪೌಂಡ್‌ ಕಟ್ಟಿಕೊಳ್ಳಲಾಗಿತ್ತು. ಅಲ್ಲದೆ 300 ಎಸಿ ಶೀಟ್‌ ಶೆಡ್‌ ಹಾಕಿಕೊಳ್ಳಲಾಗಿತ್ತು. ಇವೆಲ್ಲ ಕಾರ್ಯಾಚರಣೆಯಲ್ಲಿ ನೆಲಸಮವಾಗಿವೆ.

ಇದು ಬಿಡಿಎ ಇತಿಹಾಸದಲ್ಲಿ ನಡೆದ ಬೃಹತ್‌ ಕಾರ್ಯಾಚರಣೆ ಎಂದು ಬಣ್ಣಿಸಲಾಗಿದ್ದು, ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾದ ಗರಿಷ್ಠ ಅಕ್ರಮ ಆಸ್ತಿಯೆಂದೂ ಹೇಳಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X