ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಾನ ನಗರಿಯಲ್ಲಿ ಯಾನಾ, ಸಂಜನಾ ಸುತ್ತಾಟ!

By Staff
|
Google Oneindia Kannada News

‘ಹೆಂಡತಿ’ಯ ಟೈಮ್‌ ಪ್ರೀತಿ... ‘ಸೊಸೆ’ಯ ಚೈನ್‌ ಪ್ರೇಮ...

  • ಮಂಜು
ಉದ್ಯಾನನಗರಿ ಶುಕ್ರವಾರ ‘ಗ್ಲಾಮರ್‌’ ನಿಂದ ಮಿಂದುಹೋಗಿತ್ತು. ಒಂದು ಕಡೆ ಕನ್ನಡದ ನಟಿ ಸಂಜನಾ ‘ಟೈಮ್‌ಸೆನ್ಸ್‌’ನಲ್ಲಿ ಗ್ರಾಹಕರನ್ನು ಮರಳು ಮಾಡಿದರೆ, ಮತ್ತೊಂದೆಡೆ, ‘ಜೋಗಿ ’ ಗೀತೆಯಲ್ಲಿ ‘ಬಿನ್‌ ಲ್ಯಾಡೆನ್‌ನ ಸೊಸೆ...’ ಆಗಿರುವ ಯಾನಾ ಗುಪ್ತಾ ಆಕರ್ಷಕ ಆಭರಣಗಳೊಂದಿಗೆ ವೈಯ್ಯಾರ ಪ್ರದರ್ಶಿಸಿದರು. ಶುಕ್ರವಾರದ ಲಕ್ಷ್ಮಿಯರಾಗಿ ನಗರದ ಪ್ರತಿಷ್ಠಿತ ರಸ್ತೆಗಳಿಗೆ ಭೇಟಿ ನೀಡಿದ್ದ ಈ ತಾರಾಮಣಿಗಳು ತಮ್ಮದೇ ಕಲ್ಪನೆಗಳನ್ನು ಹೊರಗೆಡವಿದರು.

ವಾಚ್‌ ಅಂದರೆ ಬಲು ಪ್ರೀತಿ ಎಂದು ಹೇಳಿಕೊಳ್ಳುವ ಬೆರಗುಗಣ್ಣಿನ ನಟಿ ಸಂಜನಾಗೆ, ವಾಚ್‌ ಜೀವನಶೈಲಿಯ ಪ್ರತೀಕವೂ ಹೌದಂತೆ. ಆದ್ದರಿಂದ ಟೈಮೆಕ್ಸ್‌ ಆಕೆಯ ಆಯ್ಕೆಗಳಲ್ಲಿ ಮುಂಚೂಣಿಯಲ್ಲಿದೆ.

ಛಾಯಾಗ್ರಾಹಕರು ಹೇಳಿದ ರೀತಿಯಲ್ಲಿ ಫೋಸ್‌ ನೀಡಿದ ಸಂಜನಾಗೆ, ಹೋಗುವ ಅವಸರವಿರಲಿಲ್ಲ. ಮಾತನಾಡುವ ಬಯಕೆ ಇತ್ತಾದರೂ, ಎಷ್ಟು-ಹೇಗೆ-ಯಾವುದನ್ನು ಮಾತನಾಡಬೇಕೆಂಬುದರ ಗೊಂದಲವಿತ್ತು. ಆದರೆ ಅದು ನಗುಮೊಗದಲ್ಲಿ ಮರೆಯಾಗಿತ್ತು.

ಬ್ರಿಗೇಡ್‌ ರಸ್ತೆ ಬಳಿ ಇರುವ ಚರ್ಚ್‌ ಸ್ಟ್ರೀಟ್‌ನಲ್ಲಿ ಟೈಮ್‌ ಫ್ಯಾಕ್ಟರಿ ಆರಂಭಕ್ಕೆ ಟೇಪ್‌ ಕಟ್‌ ಮಾಡಲು ನಟಿ ಸಂಜನಾ ಬಂದಿದ್ದರು. ಜತೆಗೆ ಕ್ರಿಕೆಟ್‌ ವಿವರಣೆಕಾರ ಚಾರೂ ಶರ್ಮಾ ಕೂಡ ಇದ್ದರು.

ಮತ್ತೊಂದೆಡೆ, ‘ಕ್ಲಿಂಟನ್‌ನ ನಾದಿನಿ, ಲಾಲೂನ ಮಗಳು’ಹಾಡಿಗೆ ಕುಣಿದಿದ್ದ ಯಾನಾ ಗುಪ್ತಾ , ಆಕರ್ಷಕ ಆಭರಣಗಳ ಮಧ್ಯೆಯೂ ತನ್ನ ಮಾದಕತೆಯನ್ನು ಮೆರೆದಿದ್ದಳು. ಆಭರಣ ಕಾಣಲೆಂದೇ ಕಡಿಮೆ ಉಡುಪು ತೊಟ್ಟಿದ್ದಳೇ ಎಂಬ ಅನುಮಾನ ಮೂಡುವ ರೀತಿಯಲ್ಲಿದ್ದ ಗುಲಾಬಿ ಬಣ್ಣದ ಟಾಪ್‌ ತೊಟ್ಡಿದ್ದಳು. ಭಾರತದಲ್ಲಿ ಬೆಂಗಳೂರು ಎಂದರೆ ನನಗೆ ಸಕತ್ತು ಇಷ್ಟ ಎಂದು ಸುದ್ದಿಗಾರರ ಬಳಿ ಯಾನಾ ಹೇಳಿದಳು.

ಆಭರಣ ಆಯ್ಕೆ ಹಾಗೂ ಅದರ ಆಕರ್ಷಣೆ ಯಲ್ಲೇ ಸಾಕಷ್ಟು ಸಮಯ ವ್ಯಯ ಮಾಡಿದ ಯಾನಾ, ಛಾಯಾಚಿತ್ರಗ್ರಾಹಕರಿಗೆ ಫೋಸ್‌ ನೀಡಲು ಹಿಂದೆಮುಂದೆ ನೋಡಲಿಲ್ಲ. ಆ ಬೆಡಗು-ವೈಯ್ಯಾರ ಕ್ಯಾಮೆರಾ ಕಣ್ಣಿನಲ್ಲಿ ಸಿಕ್ಕು ಸೆರೆಯಾಯಿತು.

ಇನ್ನೊಂದೆಡೆ, ಕಸ್ತೂರ ಬಾ ರಸ್ತೆಯಲ್ಲಿರುವ ಜಾಸ್ಕೊ ಆಭರಣಗಳ ಮಳಿಗೆಗೆ ಯಾನಾ ಗುಪ್ತಾ ಚಾಲನೆ ನೀಡಿದರು.

(ಸ್ನೇಹ ಸೇತು : ವಿಜಯ ಕರ್ನಾಟಕ)

ನಿಮ್ಮ ಅನಿಸಿಕೆ ಬರೆಯಿರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X