ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ಉಗ್ರರ ಇಬ್ಬರು ಸಹಾಯಕ(?)ರ ಬಂಧನ

By Staff
|
Google Oneindia Kannada News

ಮೈಸೂರು : ನಗರ ಪೊಲೀಸರು ಉಗ್ರರ ಹೆಜ್ಜೆ ಗುರುತುಗಳನ್ನು ಹುಡುಕುತ್ತಿದ್ದಾರೆ. ಈಗಾಗಲೇ ಬಂಧಿತರಾಗಿರುವ ಇಬ್ಬರು ಉಗ್ರಗಾಮಿಗಳ ಸಹಾಯಕರು ಎಂಬ ಆರೋಪದ ಇಸ್ಮಾಯಿಲ್‌ ಮತ್ತು ರಫೀಕ್‌ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಗುರುವಾರ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆಗಳಿವೆ.

ಮೈಸೂರಿನ ರಾಜೀವ ನಗರದ ಈ ಆರೋಪಿಗಳು, ಉಗ್ರರಿಗೆ ಜನ್ಮದಿನದ ಪ್ರಮಾಣ ಪತ್ರ ಮತ್ತು ವಾಹನ ಚಾಲನ ಪರವಾನಗಿ ಪತ್ರ ಪಡೆಯಲು ನೆರವು ನೀಡಿದ್ದರು ಎಂಬ ಸಂಶಯಗಳಿವೆ ಎಂದು ಸುದ್ದಿಗಾರರಿಗೆ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ.

ಉಗ್ರಗಾಮಿಗಳಿಗೆ ಸಹಕಾರ ನೀಡಿದ ಸ್ಥಳೀಯರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನಷ್ಟು ಮಂದಿಯನ್ನು ಈ ಸಂಬಂಧ ಬಂಧಿಸುವ ಸಾಧ್ಯತೆಗಳಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X