ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂ ಕೊಡುಗೆ!: ಬೆಂಗಳೂರಿನ ಶಾಲೆಗಳಿಗೆ ಈದಿನ ರಜೆ
ಬೆಂಗಳೂರು : ನಗರದ ಶಾಲೆಗಳಿಗೆ ಗುರುವಾರ ಸರ್ಕಾರ ರಜೆ ನೀಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುವರ್ಣ ಕರ್ನಾಟಕದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ರಾಜ್ಯೋತ್ಸವ ಸಡಗರದಲ್ಲಿ ಸಾವಿರಾರು ಶಾಲಾ ಮಕ್ಕಳು ಭಾಗಿಗಳಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ದಣಿದಿದ್ದಾರೆ. ಹೀಗಾಗಿ ಗುರುವಾರ ರಜೆ ಘೋಷಿಸಿರುವುದಾಗಿ ಹೇಳಿದರು.
ನಟ ಶಿವರಾಜ್ ಕುಮಾರ್ ಸೇರಿದಂತೆ ವಿವಿಧ ನಟರು ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡಿಗೆ ಹೆಜ್ಜೆ ಹಾಕಿದರು. ನಂತರ ಲೇಸರ್ ಪ್ರದರ್ಶನ ನಡೆಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಮಾರಂಭ ಮುಕ್ತಾಯವಾದಾಗ ರಾತ್ರಿ 10.40ನಿಮಿಷ.
ಈ ಸಮಾರಂಭಕ್ಕಾಗಿ ಬೆಳಗ್ಗೆಯಿಂದ ರಾತ್ರಿವರೆಗೆ ದಣಿದಿದ್ದ ಮಕ್ಕಳಿಗೆ, ರಜೆ ಘೋಷಣೆ ಕೇಳಿ ಹರ್ಷವಾಯಿತು.
(ದಟ್ಸ್ ಕನ್ನಡ ವಾರ್ತೆ)